
ಮೈಸೂರು
ಅನಂತ್ಕುಮಾರ್ ದೆಹಲಿಯಲ್ಲಿ ಕರ್ನಾಟಕದ ಪರ್ಮನೆಂಟ್ ಬ್ರಾಂಡ್ ಅಂಬಾಸಿಡರ್ ಆಗಿದ್ದರು : ಗೋ. ಮಧುಸೂದನ್ ಬಣ್ಣನೆ
ಮೈಸೂರು, ನ.13:- ನಮ್ಮನ್ನಗಲಿರುವ ಅನಂತ್ಕುಮಾರ್ ಅವರು ದೆಹಲಿಯಲ್ಲಿ ಕರ್ನಾಟಕದ ಪರ್ಮನೆಂಟ್ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಎಂದು ರಾಜ್ಯ ಬಿಜೆಪಿ ವಕ್ತಾರ ಗೋ. ಮಧುಸೂದನ್ ಬಣ್ಣಿಸಿದ್ದಾರೆ.
ಮೈಸೂರಿನಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಂತ ಕುಮಾರ್ ಅವರ ತಂದೆ ನನ್ನ ತಂದೆ ಸ್ನೇಹಿತರಾಗಿದ್ದರು. ನನ್ನ ಅವರ ಸ್ನೇಹ 30 ವರ್ಷಗಳಿಗೂ ಮಿಗಿಲಾಗಿದ್ದು, ಅನಂತ್ ಇಲ್ಲ ಅನ್ನೋದೆ ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ದುಃಖಿಸಿದ್ದಾರೆ.
ಅವರೊಬ್ಬ ಉತ್ತಮ ಸಂಸದೀಯ ಪಟು ಎನ್ನುವುದರಲ್ಲಿ ಅನುಮಾನ ಇಲ್ಲ. ಕರ್ನಾಟಕದ ರಾಜಕಾರಣಿಗಳು ರಾಷ್ಟ್ರೀಯ ನಾಯಕರಾಗಿದ್ದು ಇವರಿಂದಲೇ ಎಂದರು. ಅನಂತಕುಮಾರ್ ಇಂಗ್ಲಿಷ್, ಹಿಂದಿಯಲ್ಲಿ ಅಪಾರ ಜ್ಞಾನ ಹೊಂದಿದ್ದರು. ಹಿರಿಯ ಮುತ್ಸದ್ದಿಯಾಗಿ ಸಂಸತ್ನ ಪ್ರತಿನಿಧಿಯಾಗಿದ್ದರು. ಬಿಜೆಪಿ ಅಷ್ಟೇ ಅಲ್ಲ ಎಲ್ಲ ಪಕ್ಷದ ನಾಯಕರ ಜೊತೆ ಸ್ನೇಹಜೀವಿಯಾಗಿದ್ದರು. ಅನಂತಕುಮಾರ್ ಅದಮ್ಯ ಚೇತನಕ್ಕೆ ಶಾಂತಿ ದೊರಕಲಿ ಎಂದು ಆಶಿಸಿದರು. (ಕೆ.ಎಸ್,ಎಸ್.ಎಚ್)