ಮನರಂಜನೆ

1 ಕೋಟಿ ದಾಟಿದ `ಕೆಜಿಎಫ್’ ಟ್ರೈಲರ್ ವೀಕ್ಷಣೆ.!

ಬೆಂಗಳೂರು,ನ.13- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಸಿನಿಮಾ ಟ್ರೈಲರ್ ಗೆ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದಾಖಲೆಗಳ ಪ್ರಕಾರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ವೀಕ್ಷಣೆ ಪಡೆದ ಟ್ರೈಲರ್ ಕೆಜಿಎಫ್ ಆಗಿ ಹೊರಹೊಮ್ಮಿದೆ.

ಕೆಜಿಎಫ್ ಟ್ರೈಲರ್ ಅನ್ನು 1 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕನ್ನಡದ ಟ್ರೈಲರ್ ಗಿಂತ, ಹಿಂದಿಯ ಟ್ರೈಲರ್ ಅನ್ನು ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇನ್ನುಳಿದಂತೆ ತೆಲುಗು ವರ್ಷನ್ ಕೆಜಿಎಫ್ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ತೆಲುಗು ಟ್ರೈಲರ್ 46 ಲಕ್ಷ ವೀವ್ಸ್ ಪಡೆದುಕೊಂಡಿದೆ.

ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: