ಮೈಸೂರು

ಎಲ್ಲಿಯೇ ಹೋದರೂ ನಿಮ್ಮ ಧ್ಯೇಯವನ್ನು ಬಿಡಬೇಡಿ : ಡಾ.ಎನ್.ಮಂಜುಳ ಕರೆ

ಮೈಸೂರು,ನ.13:- ಎಲ್ಲಿಯೇ ಹೋದರೂ ನಿಮ್ಮ ಧ್ಯೇಯವನ್ನು ಬಿಡಬೇಡಿ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ.ಎನ್.ಮಂಜುಳ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸರಸ್ವತಿಪುರಂನಲ್ಲಿರುವ ಜೆಎಸ್ ಎಸ್ ಮಹಿಳಾ ಕಾಲೇಜಿನಲ್ಲಿಂದು ಹನ್ನೊಂದನೆ ಪದವೀಧರರ ದಿನಾಚರಣೆಯಲ್ಲಿ ಪಾಲ್ಗೊಂಡು ಪದವಿ ಪ್ರದಾನಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಇಂದು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲೂ  ಜೆಎಸ್ ಎಸ್ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ಜೆಎಸ್ ಎಸ್ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ನ್ಯಾಕ್ ವತಿಯಿಂದ ಎ ಗ್ರೇಡ್ ಪಡೆದಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ನೀವು ಶಿಕ್ಷಣ ಪಡೆಯುತ್ತಿದ್ದೀರಿ. ಇಲ್ಲಿ ಕೇವಲ ಶಿಕ್ಷಣವನ್ನಷ್ಟೇ ನೀಡಲಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡಲಾಗುತ್ತಿದೆ ಎಂದರು. ನೀವೀಗ ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೀರಿ, ಬೃಹತ್ತಾದ ನಾಳೆ ನಿಮ್ಮ ಮುಂದಿದೆ. ನೀವು ಇಲ್ಲಿ ಏನೆಲ್ಲ ಕಲಿತಿದ್ದೀರೋ ಅದನ್ನು ಸದುಪಯೋಗಪಡಿಸಿಕೊಳ್ಳಿ. ಸಮಾಜ ಕೂಡ ನಿಮ್ಮ ಮೇಲೆ ನಿರೀಕ್ಷೆಯನ್ನಿಟ್ಟುಕೊಂಡಿದೆ.  ನಿರ್ದಿಷ್ಟ ಗುರಿ ಹೊಂದಿದಲ್ಲಿ ಉತ್ತಮ ಭವಿಷ್ಯ ನಿಮ್ಮದಾಗಲಿದೆ. ನೀವು ಎಲ್ಲಿಯೇ ಹೋದರೂ ನಿಮ್ಮ ಧ್ಯೇಯವನ್ನು ಮಾತ್ರ ಬಿಡಬೇಡಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿದ್ದರು. ಜೆಎಸ್ ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್ ಮಠ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭ ಪ್ರಾಂಶುಪಾಲ ಡಾ.ಕೆ.ವಿ.ಸುರೇಶ್, ಡಾ.ಜಿ.ಆರ್.ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀವಿದ್ಯಾ ಅಯ್ಯರ್ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಪಿ ಉಮಾದೇವಿ ಸ್ವಾಗತಿಸಿದರು. ಡಾ.ಎನ್.ಮಲ್ಲಿಕಾ ನಿರೂಪಿಸಿದರು. ಡೀನ್ ಡಾ.ಹೆಚ್.ಬಿ ಸುರೇಶ್ ವಂದಿಸಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: