ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲನ್ನು ಮೀಟಿ ಕಳ್ಳತನ

ಮೈಸೂರು,ನ.14:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲನ್ನು ಮೀಟಿ ಚಿನ್ನ ಮತ್ತು ಬೆಳ್ಳಿಯ ಆಭರಣ ಹಾಗೂ ನಗದನ್ನುಕಳ್ಳರು ದೋಚಿಕೊಂಡು ಹೋದ ಘಟನೆ ಅರವಿಂದ ನಗರದಲ್ಲಿ ನಡೆದಿದೆ.

ಈ ಕುರಿತು ಸಿ.ಸುನಿಲ್ ಕುಮಾರ್ ಎಂಬವರು ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  #05, 01 ನೇ ಕ್ರಾಸ್, 02 ನೇ ಹಂತ, ಅರವಿಂದ ನಗರದ ಸುನಿಲ್ ಕುಮಾರ್  ಸ್ವಂತ ಊರಾದ ಕ್ಯಾಲಿಕೆಟ್ ಗೆ ನ.9 ರಂದು ಮದ್ಯಾಹ್ನ 12 ಗಂಟೆಗೆ ಹೋಗಿ ನ.12 ರಂದು ಸಂಜೆ 6.45 ಗಂಟೆಗೆ ವಾಪಾಸ್ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ತೆರೆದಂತಿತ್ತು. ಪರಿಶೀಲಿಸಿದಾಗ ಯಾರೋ ಮನೆಯ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯ ಒಳಗೆ ಹೋಗಿ ರೂಮಿನಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಮಗುವಿನ ಬೆಳ್ಳಿಯ ಒಂದು ಸೊಂಟದ ಉಡದಾರ ಮತ್ತು ಮಗುವಿನ ಬೆಳ್ಳಿಯ ಕಾಲು ಗೆಜ್ಜೆ ಸುಮಾರು 100 ಗ್ರಾಂ ಸುಮಾರು ಅಂದಾಜು ಬೆಲೆ 3000ರೂ. ಮತ್ತು ಮಗುವಿನ ಚಿನ್ನದ ಒಂದು ಜೊತೆ ಓಲೆ ಮತ್ತು ಒಂದು ಉಂಗುರ ಅಂದಾಜು ಸುಮಾರು 7 ಗ್ರಾಂ ಅಂದಾಜು ಬೆಲೆ ಸುಮಾರು 14.000ರೂ. ಗೋಲಕದಲ್ಲಿದ್ದ ಹಣ ಒಟ್ಟು ಸುಮಾರು 7000ರೂ. ವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: