ಮೈಸೂರು

ಜನತೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ : ಮಾಜಿ ಶಾಸಕ ಟಿ.ಕೆ.ಚಿನ್ನಸ್ವಾಮಿ ಬೇಸರ

ಮೈಸೂರು,ನ.14:- ಯಾವುದೇ ಸಾಹಿತ್ಯ ಪ್ರಕಾರಗಳ ಬಿಡುಗಡೆ ಸಮಾರಂಭದಲ್ಲಿ ಜನರು ಸೇರುವುದೇ ಕಡಿಮೆ ಆಗುತ್ತಿದ್ದು, ಜನತೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ ಎಂದು ಕೃಷ್ಣರಾಜನಗರದ ಮಾಜಿ ಶಾಸಕ ಟಿ.ಕೆ.ಚಿನ್ನಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿಂದು ಶ್ರೀಸಾಯಿನಾಥ ಪ್ರಕಾಶನದ ಮಕ್ಕಳ ಸಾಹಿತ್ಯದ ಎರಡು ಗ್ರಂಥಗಳ ಬಿಡುಗಡೆ ಕಾರ್ಯಕ್ರಮ, ಮಕ್ಕಳ ಸಾಹಸದ ಸತ್ಯಕಥೆಗಳ ಬಿಡುಗಡೆ ಕಾರ್ಯಕ್ರಮ, ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿನವರಲ್ಲಿ ಮಕ್ಕಳ ಸಾಹಿತ್ಯ ಕುರಿತು ಅಂತಲ್ಲ, ಯಾವುದೇ ಸಾಹಿತ್ಯ ಪ್ರಕಾರಗಳ ಬಿಡುಗಡೆ ಸಮಾರಂಭಕ್ಕೆ ಜನತೆ ಹೋಗುತ್ತಿಲ್ಲ. ನಾವೆ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಅದೇ ರಾಜಕಾರಣಿಗಳು ಬಂದರೆ ಸ್ಥಳನೇ ಇರಲ್ಲ. ಇದು ನಮ್ಮ ದೇಶದ ದೌರ್ಭಾಗ್ಯ  ಎಂದರು. ಬೇರೆ ದೇಶಗಳ್ಲಿಯೂ ಕಾರ್ಯಕ್ರಮ ನೋಡಿದ್ದೇನೆ. ಪುಟ್ಟ ದೇಶವಾದರೂ ಎಷ್ಟೊಂದು ಜನ ಸೇರುತ್ತಾರೆ ಎಂದರು. ಒಂದು ಪುಸ್ತಕ ಬರೆಯೋಕೆ ನಾಲ್ಕರಿಂದ ಆರು ತಿಂಗಳ ಅವಧಿ ಬೇಕು. ಈ ವಯಸ್ಸಿನಲ್ಲಿ ಕುಳಿತು ಬರೆಯಲು ಕಷ್ಟ. ಆದರೂ ನವಚೇತನ ಬಂದಂತೆ ಬೋರೇಗೌಡರು ಬರೆದು ಸಾಹಿತ್ಯಾಭಿಮಾನ ಮೆರೆದಿದ್ದಾರೆ. ಮಕ್ಕಳಿಗೆ ಕಥೆಯೆಂದರೆ ತುಂಬಾ ಇಷ್ಟ. ನಾವ ಚಿಕ್ಕವರಿದ್ದಾಗ ಅಜ್ಜ-ಅಜ್ಜಿ ಕಥೆ ಹೇಳುತ್ತಿದ್ದರು. ರಾಮಾಯಣ ಮಹಾಭಾರತದ ಸಾಹಸದ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇಂದಿನ ಪೋಷಕರು ಓದು ಓದು ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಹಿಂದೆ ಕೂಡು ಕುಟುಂಬಗಳಿತ್ತು. ಆದರೆ ಇಂದು ಅಜ್ಜ-ಅಜ್ಜಿ ಯರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಮಕ್ಕಳಲ್ಲಿ ರಾಷ್ಟ್ರಭಕ್ತಿ ರಾಷ್ಟ್ರಪ್ರೇಮಗಳು ಕಡಿಮೆಯಾಗುತ್ತಿವೆ. ಮೊದಲೆಲ್ಲ ಶಾಲೆಗಳಲ್ಲಿ ನೀತಿಕಥೆಗಳಿಗಾಗಿ ಅವಧಿಯಿರುತ್ತಿತ್ತು. ಇಂದು ಅವನ್ನೆಲ್ಲ ಹೇಳುತ್ತಿಲ್ಲ. ನೀತಿ, ರಾಷ್ಟ್ರಭಕ್ತಿ ಕಡಿಮೆಯಾಗುತ್ತಿದೆ ಎಂದರಲ್ಲದೇ ಜಪಾನ್ ಅವರಿಗೆ ಅವರ ದೇಶದ ಮೇಲಿರುವ ಪ್ರೇಮವನ್ನು ವಿವೇಕಾನಂದರ ಒಂದು ಸಣ್ಣ ಕಥೆಯ ಮೂಲಕ ವಿವರಿಸಿದರು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಯಿನಾಥ್ ಪ್ರಕಾಶನದ ಸಂಸ್ಥಾಪಕ ಅಪ್ಪಾಸ್ವಾಮಿ,  ಶಾರದಾ ವಿಲಾಸ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿಮಲಾಶ್ರೀ, ಶಿಕ್ಷಣ ತಜ್ಞ ನೀ.ಗಿರಿಗೌಡ ಮತ್ತಿತರರು ಉಪಸ್ಥಿತರಿದ್ದರು.  ಸಾಹಸದ ಸತ್ಯಕಥೆಗಳು ಲೇಖಕರಾದ ಬಿ.ಬೋರೇಗೌಡ, ರಾಷ್ಟ್ರ ರಾಜ್ಯ ಶೌರ್ಯ ಪ್ರಶಸ್ತಿ ವಿಜೇತರಾದ ಮಾ.ಶ್ರೇಯಸ್ ಎನ್ ರಾವ್, ಮಾ.ಎಸ್.ಎಸ್.ಮನೋಜ್ ಅವರನ್ನು ಸನ್ಮಾನಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: