ಸುದ್ದಿ ಸಂಕ್ಷಿಪ್ತ
ದೇವಸ್ಥಾನದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ
ಮೈಸೂರು,ನ.14 : ವರುಣಾ ಹೋಬಳಿಯ ಆಯರ ಹಳ್ಳಿಯ ಶ್ರೀ ಸಿದ್ಧಿ ವಿನಾಯಕ ಲಕ್ಷ್ಮೀದೇವಿ ಚೌಡೇಶ್ವರಿ ದೇವಸ್ಥಾನದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆಯನ್ನು ನ.15,16ರಂದು ಏರ್ಪಡಿಸಲಾಗಿದೆ.
ದೇವಿಗೆ ಅಭಿಷೇಕ ಮಾಡಲಿಚ್ಚಿಸುವವರು ನಿಗದಿಗೊಳಿಸಿದ ದರ ನೀಡ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳಬಹುದಾಗಿದೆ, ನ.16ರಂದು ಪೂರ್ಣಾವಧಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)