ಮೈಸೂರು

ಜ.4-6: ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣ್ ; ಸಾರ್ವಜನಿಕರು ಸಹಕರಿಸಿ

ಮೈಸೂರಿನಲ್ಲಿ ಜ.4 ರಿಂದ 6 ರ ವರೆಗೆ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ನಡೆಯಲಿದೆ. ಕೇಂದ್ರದಿಂದ ಆಗಮಿಸುವ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದವರು ಸಮೀಕ್ಷೆ ನಡೆಸಲಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಜೆ.ಜಗದೀಶ ತಿಳಿಸಿದರು.

ಮಹಾನಗರಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಜಗದೀಶ್ ಈಗಾಗಲೇ ಎರಡು ಬಾರಿ ಸ್ವಚ್ಛ ನಗರಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದು. ಈ ಬಾರಿಯೂ ಪಡೆಯುವ ನಿರೀಕ್ಷೆ ಇದೆ. ಅದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.

ಮೈಸೂರು 500 ನಗರದಗಳೊಂದಿಗೆ ಸ್ಪರ್ಧಿಸಲಿದ್ದು, ವೀಕ್ಷಣೆಗಾಗಿ ಅಧಿಕಾರಿಗಳು ಕೇಳಿದ ಮಾರುಕಟ್ಟೆ, ದೇವಾಲಯ, ಬಸ್ ಮತ್ತು ರೈಲ್ವೆ ನಿಲ್ದಾಣ, ಚರ್ಚ್, ಶೌಚಾಲಯ ಸೇರಿದಂತೆ ನಾಲ್ಕು ಕಡೆ ಸ್ಥಳ ಗುರುತಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆ 6000 ಅಂಕಗಳಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಸಕರಾತ್ಮಕವಾಗಿ ನೀಡಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಉಪಮೇಯರ್ ರತ್ನಲಕ್ಷಣ್, ಜಿಲ್ಲಾಧಿಕಾರಿ ಡಿ.ರಂದೀಪ್, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: