ಮೈಸೂರು

ಸ್ಕೂಟರ್ ಕಲಿಯುತ್ತಿದ್ದ ವೇಳೆ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಣ

ಮೈಸೂರು,ನ.15:- ಸ್ಕೂಟರ್ ಕಲಿಯುತ್ತಿದ್ದ ವೇಳೆ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ತಿ.ನರಸೀಪುರದ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.

ಆಲನಹಳ್ಳಿ ನಿವಾಸಿ ಮಂಜುಳಾ ಎಂಬವರೇ ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ. ಇವರು ಸ್ಕೂಟರ್ ಕಲಿಯುತ್ತಿದ್ದ ವೇಳೆ ಹಿಂದಿನಿಂದ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ 1.7ಲಕ್ಷರೂ ಮೌಲ್ಯದ 50ಗ್ರಾಂ ತೂಕದ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಬೈಕಿನಲ್ಲಿ ಬಂದ ದುಷ್ಕರ್ಮಿಗಳಲ್ಲಿ ಹಿಂದೆ ಕುಳಿತಿದ್ದವನು ಸರವನ್ನು ಅಪಹರಿಸಿದ್ದು, ಇನ್ನೊಬ್ಬ ಸುಮ್ಮನೆ ನೋಡುತ್ತ ಕುಳಿತಿದ್ದ ಎನ್ನಲಾಗಿದೆ.

ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: