ಮೈಸೂರು

ಡಾ.ಎಸ್.ಪಿ.ಯೋಗಣ್ಣನವರ ಪುಸ್ತಕ ಲೋಕಾರ್ಪಣೆ

ಮೈಸೂರು ಕೆ.ಆರ್. ಆಸ್ಪತ್ರೆಯ ಆವರಣದ ಪೆಥಾಲಜಿ ಉಪನ್ಯಾಸ ಸಭಾಂಗಣದಲ್ಲಿ ಸೋಮವಾರ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶಿಕ್ಷಕರ ಸಂಘ, ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆ ಮತ್ತು ತಾಯಮ್ಮ ಪ್ರಕಾಶನ ಆರೋಗ್ಯ ಯೋಗ ಸಂಸ್ಥೆ  ಆಶ್ರಯದಲ್ಲಿ ಡಾ.ಎಸ್.ಪಿ.ಯೋಗಣ್ಣನವರ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಎಂಎಂಸಿಪಿಆರ್ ನಿರ್ದೇಶಕ ಡಾ.ಕೆ.ಕೃಷ್ಣಮೂರ್ತಿ ಅಧ್ಯಕ್ಷತೆವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ವೈದ್ಯ ಸಾಹಿತಿ ಡಾ.ಹೆಚ್.ಟಿ.ಚಿದಾನಂದ, ಆಧ್ಯಾತ್ಮಿಕ ಪ್ರವರ್ತಕ ಮಹಮದ್ ಕುಂಞಿ, ಐಎಂಎ ಅಧ್ಯಕ್ಷ ಡಾ.ಬಸವನಗೌಡಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಜಿ.ಆರ್.ಜಗನ್ನಾಥ ಬಾಬು ಉಪಸ್ಥಿತರಿದ್ದರು.

Leave a Reply

comments

Related Articles

error: