ಮೈಸೂರು

ಸ್ವಚ್ಛ ನಗರಿ ಸಮೀಕ್ಷೆಗೆ ಸಿದ್ಧವಾಗುತ್ತಿದೆ ಮೈಸೂರು

ಅರಮನೆ ನಗರಿ ಮೈಸೂರು ಸ್ವಚ್ಛ ನಗರ ಆಯ್ಕೆಯ ‘ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಗೆ’ ಸಕಲ ಸಿದ್ಧತೆಗಳು ನಡೆದಿದ್ದು, ರಸ್ತೆಗಳಿಗೆ ಮತ್ತು  ವಿಭಜಕಕ್ಕೆ ಬಣ್ಣ, ಚರಂಡಿ ಸ್ವಚ್ಛತೆ, ಬಡಾವಣೆಗಳಲ್ಲಿ ಕಸ ತ್ಯಾಜ್ಯ ವಿಲೇವಾರಿ ಸೇರಿದಂತೆ ಸ್ವಚ್ಛತಾ ಕಾರ್ಯಕ್ರಮವನ್ನು ಪಾಲಿಕೆಯಿಂದ ನಡೆಸಲಾಗುತ್ತಿದೆ.

ಜ.4 ರಿಂದ 6ರ ವರೆಗೆ ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಜರುಗಲಿದೆ. ಜಿಲ್ಲಾಡಳಿತ ಹಾಗೂ ಮೈಸೂರು ನಗರಪಾಲಿಕೆ ಸಂಯುಕ್ತವಾಗಿ ನಗರದಾದ್ಯಂತ ಬಡಾವಣೆಗಳು, ರಸ್ತೆಗಳು, ಬಸ್ ನಿಲ್ದಾಣ ಸೇರಿದಂತೆ ನಗರದ ಹಲವಾರು ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕಳೆದ ಹಲವಾರು ದಿನಗಳಿಂದ ಕೈಗೊಂಡಿದೆ.

ದೇಶದಲ್ಲಿಯೇ ಸ್ವಚ್ಛ ನಗರಿಯೆಂದು ಎರಡು ಬಾರಿ ಪ್ರಶಸ್ತಿ ಪಡೆದಿರುವ ಮೈಸೂರು ನಗರಿಯ ಹ್ಯಾಟ್ರಿಕ್ ಗೆಲುವಿಗಾಗಿ ಪೌರಕಾರ್ಮಿಕರು ಸೇರಿದಂತೆ ಅಧಿಕಾರಿ ವರ್ಗವೂ ಹಗಲಿರುಳು ಶ್ರಮಿಸುತ್ತಿದೆ. ಸಾರ್ವಜನಿಕರ ಅಭಿಪ್ರಾಯವೇ ಮಾನದಂಡವಾಗಿದೆ. ಮೂರುದಿನಗಳ ಕಾಲ ನಡೆಯುವ ಸಮೀಕ್ಷೆಯೂ ನಗರಾಭಿವೃದ್ಧಿ ಮಂತ್ರಾಲಯ ಸ್ವಚ್ಛ ಭಾರತದಡಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ನಡೆಸುವ ಸಮೀಕ್ಷೆಗೆ 2 ಸಾವಿರ ಅಂಕಗಳನ್ನು ನಿಗದಿಗೊಳಿಸಿದ್ದು, ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣೆ ಹಾಗೂ ದಾಖಲೀಕರಣ್ಕೆ ಶೇ.45 ಅಂಕಗಳು, ಅಧಿಕಾರಿಗಳ ವೈಯುಕ್ತಿಕ ವೀಕ್ಷಣೆಗೆ ಶೇ.25 ಅಂಕ ಮತ್ತು ಸಾರ್ವಜನಿಕ ಅಭಿಪ್ರಾಯಕ್ಕೆ ಶೇ.30ರಷ್ಟು ಅಂಕಗಳನ್ನು ನಿಗದಿಗೊಳಿಸಲಾಗಿದ್ದು 3 ಹಂತಗಳಲ್ಲಿ ಸಮೀಕ್ಷೆ ಕಾರ್ಯ ನಡೆಯಲಿದೆ.

ಸಮೀಕ್ಷೆ ವೇಳೆಯಲ್ಲಿ ಜನರ ಮುಂದಿಡುವ ಪ್ರಶ್ನೆಗಳು :

  • ಸ್ವಚ್ಚತಾ ರ್ಯಾಂಕಿಂಗ್’ಗೆ ಮೈಸೂರು ಭಾಗವಹಿಸುವ ಬಗ್ಗೆ ನಿಮಗೆ ತಿಳಿದಿದೆಯೇ?
  • ನಿಮ್ಮ ಸುತ್ತಮುತ್ತಲಿನ ಪ್ರದೇಶ ಕಳೆದ ವರ್ಷಕ್ಕಿಂತ ಈ ಸಲ ಸ್ವಚ್ಛವಾಗಿದೆಯೇ?
  • ಮಾರುಕಟ್ಟೆಗಳಲ್ಲಿ ಕಸದ ತೊಟ್ಟಿಗಳು ಲಭ್ಯವಿದೆಯೇ?
  • ಕಸ ಸಂಗ್ರಹಿಸುತ್ತಿರುವ ಕಾರ್ಯವೈಖರಿ ತೃಪ್ತಿ ನೀಡಿದೆಯೇ?
  • ಕಳೆದ ವರ್ಷಕ್ಕಿಂತ ಶೌಚಗೃಹಗಳ ಸಂಖ್ಯೆ ಹೆಚ್ಚಿದೆಯೇ? ಸಾರ್ವಜನಿಕ ಶೌಚಗೃಹಗಳು ಸ್ವಚ್ಛವಾಗಿವೆಯೇ?

ಎನ್ನುವ ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎನ್ನುವ ಉತ್ತರವನ್ನು ನೀಡಬೇಕಾಗಿದೆ.

‘ಸ್ವಚ್ಛತಾ ಆ್ಯಪ್’ ‘swachata-MoU’ ಮೊಬೈಲ್‍ನಲ್ಲಿ ಡೌನ್ ಲೋಡ್‍ಗೂ ಅಂಕಗಳನ್ನು ಪ್ರಸಕ್ತ ಸಾಲಿನಲ್ಲಿ ನಿಗದಿ ಮಾಡಲಾಗಿದೆ. ಈಗಾಗಲೇ 5500 ಜನರು ಅಳವಡಿಸಿಕೊಂಡಿದ್ದು, 15 ಸಾವಿರ ಜನರು ಈ ಆ್ಯಪ್‍ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಗುರಿ ನಿಗದಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ 9449841196, 0821-2418800 ಅನ್ನು ಸಂಪರ್ಕಿಸಬಹುದು.

index

 

 

 

Leave a Reply

comments

Related Articles

error: