ಮೈಸೂರು

ನ.16: ಭಾವಿಸಮೀರ ಶ್ರೀ ವಾದಿರಾಜ ವೈಭವಂ ಸಮಾರೋಪ ಸಮಾರಂಭ

ಮೈಸೂರು, ನ.15:- ನಗರದ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಕಳೆದ ನಾಲ್ಕು ದಿನಗಳಿಂದ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿರುವ ಗಾನಸಿರಿ-ವೇದಾಂತ ಲಹರಿ ಭಾಗ-3 ಭಾವಿಸಮೀರ ಶ್ರೀ ವಾದಿರಾಜ ವೈಭವಂ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ನ.16ರಂದು ಶುಕ್ರವಾರ ಏರ್ಪಡಿಸಲಾಗಿದೆ.

ಅಂದು ಸಂಜೆ 5ರಿಂದ 6.30ರವರೆಗೆ ನಗರದ ಪ್ರಸಿದ್ಧ ಗಾಯಕರಾದ ವಿದುಷಿ ಶುಭಾ ರಾಘವೇಂದ್ರ, ವಿದ್ವಾನ್ ರಾಜೇಶ್ ಪಡಿಯಾರ್ ಹಾಗೂ ವಿದುಷಿ ಸುಮನಾ ಶ್ರೀಕಾಂತ್‍ ಅವರಿಂದ ದಾಸರ ಪದಗಳ ಅಂತ್ಯಾಕ್ಷರಿ ಏರ್ಪಡಿಸಲಾಗಿದೆ.

ಸಂಜೆ 6.30ರಿಂದ 8ರವರೆಗೆ ಸೋದೆ ಮಠದ ಪರಮಪೂಜ್ಯ 108 ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರಿಗೆ ನಾಣ್ಯದಿಂದ ತುಲಾಭಾರ ಹಾಗೂ ಪುಷ್ಪವೃಷ್ಟಿ ಏರ್ಪಡಿಸಲಾಗಿದೆ. ಇದಾದ ನಂತರ ವಿ.ಪಿ.ಎಸ್.ಶೇಷಗಿರಿ ಆಚಾರ್ಯ ಹಾಗೂ ಡಾ.ಸಿ.ಎಚ್.ಶ್ರೀನಿವಾಸ ಮೂರ್ತಿ ಆಚಾರ್ಯರಿಗೆ ಶ್ರೀಪಾದಂಗಳವರ ಅಮೃತಹಸ್ತದಿಂದ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.  ಕಾರ್ಯಕ್ರಮದ ನಂತರ ಎಲ್ಲರಿಗೂ ಶ್ರೀಪಾದಂಗಳವರು ತುಲಾಭಾರದ ನಾಣ್ಯ ಹಾಗೂ ಫಲಮಂತ್ರಾಕ್ಷತೆಯನ್ನು ನೀಡಿ ಭಕ್ತರಿಗೆ ಅನುಗ್ರಹಿಸಲಿದ್ದಾರೆ. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಕಾರ್ಯದರ್ಶಿ ಎಸ್.ರವಿಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7204043565 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: