ಮೈಸೂರು

ಹಸು ಕಳ್ಳನ ಬಂಧನ

ಹುಡ್ಕೋ ಬಡಾವಣೆಯ ಅಹಮದ್ ಎಂಬಾತನನ್ನು ಹಸು ಕಳ್ಳತನ ಆರೋಪದ ಮೇಲೆ ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆಯು ಸೋಮವಾರ ಹನುಮಂತನಗರದಲ್ಲಿ ವರದಿಯಾಗಿದೆ.

ಆರೋಪಿಯು 50 ಸಾವಿರ ರೂಪಾಯಿ ಮೌಲ್ಯದ ಹಸುವನ್ನು ಗೂಡ್ಸ್ ಆಟೊದಲ್ಲಿ ಸಾಗಣಿ ಮಾಡುತ್ತಿದ್ದು ಈ ಬಗ್ಗೆ ತಿಳಿದ ಸಾರ್ವಜನಿಕರು ದಾಳಿ ನಡೆಸಿ ಆರೋಪಿಗೆ ಥಳಿಸಿದ್ದಾರೆ. ಇದುವರೆಗೂ ಈತ 50 ಹಸುಗಳನ್ನು ಕಳ್ಳತನ ಮಾಡಿರುವ ಆರೋಪವಿದ್ದು ಈತ ಹಸು ಕಳ್ಳತನ ಮಾಡಲು ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದ. ಹಾಗೂ ಪತ್ನಿಯ ಸಹಕಾರದೊಂದಿಗೆ ಈ ಕೃತ್ಯವನ್ನೇಸಗುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಿ ತನಿಖೆ ನಡೆಯುತ್ತಿದೆ.

 

 

Leave a Reply

comments

Related Articles

error: