ಸುದ್ದಿ ಸಂಕ್ಷಿಪ್ತ

ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ : ನುಡಿನಮನ ನಾಳೆ

ಮೈಸೂರು,ನ.15 : ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆಯ 18ನೇ ವರ್ಷದ 115ನೇ ಕಾರ್ಯಕ್ರಮ, ಮಹರ್ಷಿ ವಾಲ್ಮೀಕಿ ಜಯಂತಿ, ಹಾಗೂ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ತೃತೀಯ ಮಾಸದ ನೆನಪಿನಲ್ಲಿ ‘ಅವಲೋಕನ ಹಾಗೂ ನುಡಿನಮನ ಮತ್ತು ಅಭಿನಂದನಾ ಸಮಾರಂಭವನ್ನು ನಾಳೆ (16)ರ ಸಂಜೆ 4ಗಂಟೆಗೆ ನಂಜನಗೂಡಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ.

ದೇವಿರಮ್ಮನಹಳ್ಳಿಯ ಶರಣಸಂಗಮ ಮಠದ ಪೀಠಾಧ್ಯಕ್ಷ ಶ್ರೀ ನಾಗರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು, ಶಾಸಕ ಹರ್ಷವರ್ಧನ, ಮಾಜಿ ಶಾಸಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಅಖಿಲ ಕರ್ನಾಟಕ ಶಿವಶರಣ ಮಾದಾರ ಚನ್ನಯ್ಯ ವಿಚಾರ ವೇದಿಕೆ ಪೀಠಾಧ್ಯಕ್ಷ ಡಾ.ಎಸ್.ಈ ಮಹದೇವಪ್ಪ ಮತ್ತಿತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: