ದೇಶಪ್ರಮುಖ ಸುದ್ದಿಮನರಂಜನೆ

ವಿರಾಟ್-ಅನುಷ್ಕಾ ದಾಖಲೆ ಮುರಿದ ರಣವೀರ್-ದೀಪಿಕಾ ಮದುವೆ ಫೋಟೊ

ಬೆಂಗಳೂರು (ನ.16): ವಿರಾಟ್-ಅನುಷ್ಕಾ ಜೋಡಿ ಮದುವೆಯಾದಾಗ ಅವರ ಮದುವೆ ಫೋಟೊಗಳ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಜನಪ್ರಿಯವಾಗಿದ್ದವು. ಇದೀಗ ಬಾಲಿವುಡ್ ನವ ಜೋಡಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇದೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೈಡ್ ಹಾಕುವ ಮೂಲಕ‌ ಹೊಸದೊಂದು ದಾಖಲೆ ಬರೆದಿದ್ದಾರೆ.

ಇಟಲಿಯಲ್ಲಿ ವಿವಾಹ ಬಂಧನಕ್ಕೊಳಗಾದ ರಣ್-ದೀಪಾ ಜೋಡಿಯ ಫೋಟೋವನ್ನು ರಣವೀರ್ ಸಿಂಗ್ ತಮ್ಮ ಖಾತೆಯಲ್ಲಿ ಹಾಕಿಕೊಂಡ ಕೆಲವೇ ಗಂಟೆಗಳಲ್ಲಿ 26 ಲಕ್ಷ ಲೈಕ್‌ಗಳನ್ನು ಪಡೆಯುವ ಮೂಲಕ‌ ವಿರಾಟ್-ಅನುಷ್ಕಾ ಶರ್ಮಾ ಜೋಡಿಯನ್ನು ಸೈಡ್ ಹಾಕಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದ ವಿರಾಟ್ ಕೊಹ್ಲಿ,‌ ಅನುಷ್ಕಾ ಶರ್ಮಾ ಅವರ ವಿವಾಹದ ಫೋಟೋವನ್ನು ಅನುಷ್ಕಾ ಹಾಕಿದಾಗ, 15 ಗಂಟೆಯೊಳಗೆ 25 ಲಕ್ಷ ಲೈಕ್ ದಾಟಿತ್ತು. ಆದರೆ ಈ ಹೊಸ ಜೋಡಿಯ ಫೋಟೋ ಇದಕ್ಕಿಂತ ಹೆಚ್ಚು ಲೈಕ್ ಗಳಿಸಿದೆ. ರಣವೀರ್ ಹಾಕಿದ ಫೋಟೋಗೆ ಲೈಕ್ ಗಳು ಇನ್ನು ಬರುತ್ತಿದ್ದು, ಆರು‌ ವರ್ಷದ ಬಳಿಕ‌ ಮದುವೆಯ ಬಂಧನದಲ್ಲಿರುವ ನವ ವಿವಾಹಿತ ಜೋಡಿಗೆ ನೆಟ್ಟಿಗರು‌ ಶುಭಾಶಯ ಕೋರುತ್ತಿದ್ದಾರೆ.

ಇಟಲಿಯಲ್ಲಿ ನಡೆದ ಭರ್ಜರಿ ಮದುವೆಯಲ್ಲಿ ಇಬ್ಬರ ಫೋಟೋಗಳನ್ನು ಯಾರೂ ತೆಗೆಯುವಂತಿಲ್ಲ ಎಂದಿದ್ದರು. ಆದರೆ ಮದುವೆಯಾದ ಒಂದು ದಿನದ ಬಳಿಕ ಫೋಟೋವನ್ನು ಸ್ವತಃ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

ಈ ಇಬ್ಬರ ಮದುವೆ ಫೋಟೋವನ್ನು ಹೃದಯದ ಇಮೋಜಿಯೊಂದಿಗೆ ಹಾಕಿಕೊಂಡಿರುವ ರಣವೀರ್ ಪೋಸ್ಟ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಿಂಧಿ ಹಾಗೂ ಕೊಂಕಣಿ ಸಾಂಪ್ರದಾಯಿಕ ಶೈಲಿಯ ಮದುವೆಯ ಫೋಟೋ ಇದೀಗ ವೈರಲ್ ಆಗಿದೆ.

ಈ ಇಬ್ಬರು ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಹಾಗೂ ಆಭರಣವನ್ನು ಧರಿಸಿದ್ದು, ರೆಡ್ ರೋಸ್ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಹಾಕಿದ ಕೆಲವೇ ಕೆಲವು ಕ್ಷಣದಲ್ಲಿ ಸಾವಿರಾರು ಲೈಕ್‌ಗಳು ಬಂದಿವೆ. ದೀಪಿಕಾ ಪ್ರೊಫೈಲ್‍ನಲ್ಲಿ ಹಾಕಿರುವ ಫೋಟೊ ಕೂಡ ತುಂಬಾನೇ ಲೈಕ್ಸ್ ಪಡೆದಿದೆ. (ಎನ್.ಬಿ)

View this post on Instagram

❤️

A post shared by Ranveer Singh (@ranveersingh) on

View this post on Instagram

❤️

A post shared by Deepika Padukone (@deepikapadukone) on

Leave a Reply

comments

Related Articles

error: