ಮೈಸೂರು

ಹೋಟೆಲ್ ನಲ್ಲಿ ತಂಗಿದ್ದ ಪ್ರವಾಸಿಗರ ಹಣ ಕಳುವು

ಮೈಸೂರು,ನ.16:- ಹೋಟೆಲ್ ಒಂದರಲ್ಲಿ ತಂಗಿದ್ದ  ಪ್ರವಾಸಿಗರ ಕೋಣೆಯಲ್ಲಿರಿಸಿದ್ದ ಸಾವಿರಾರು ರೂ ಕಳ್ಳತನವಾದ ಘಟನೆ ನಜರ್ ಬಾದ್ ನಲ್ಲಿ ನಡೆದಿದೆ.

ಈ ಕುರಿತು ನಜರ್ ಬಾದ್ ಪೊಲೀಸ್ ಠಾಣೆಗೆ ಕಲ್ಪನಾ ಮಧುಕರ್ ಎಂಬವರು ದೂರು ನೀಡಿದ್ದಾರೆ.  ನ.13 ರಂದು ತಮ್ಮ ಗ್ರಾಹಕರನ್ನು ಪ್ರವಾಸಕ್ಕೆಂದು ಮೈಸೂರಿಗೆ ಕರೆದುಕೊಂಡು  ಬಂದು ರಾತ್ರಿ ಸುಮಾರು 10ರ ಸಮಯಕ್ಕೆ ಹೋಟೆಲ್ ಎಂ.ಬಿ ಇಂಟರ್ನ್ಯಾಷನಲ್ ಗೆ ಕರೆದುಕೊಂಡು ಹೋಗಿ ರೂಂ ಗಳಲ್ಲಿ ಉಳಿದುಕೊಂಡಿದ್ದರು, ನಂತರ ಮಧ್ಯರಾತ್ರಿ 12 ಗಂಟಗೆ ಎಲ್ಲರೂ ಊಟ ಮಾಡಿಕೊಂಡು ಮಧ್ಯಾರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ನೋಡಲಾಗಿ ಹಣ ಅವರ ರೂಂ ನಲ್ಲಿಯೇ ಇತ್ತು, ನಂತರ ಬೆಳಗ್ಗೆ ಎದ್ದು ಸುಮಾರು 7.20 ರ ಸಮಯದಲ್ಲಿ ನೋಡಲಾಗಿ ರೂಂ ನಂ-221, 209 ಮತ್ತು 219ರಲ್ಲಿ ತಂಗಿದ್ದ ಗ್ರಾಹಕರುಗಳ ಬ್ಯಾಗುಗಳು ನೆಲದ ಮೇಲೆ ಬಿದ್ದಿತ್ತು. ಅವುಗಳನ್ನು ನೋಡಲಾಗಿ ಬ್ಯಾಗ್ ನಲ್ಲಿದ್ದ ಸುರೇಶ್.ಕೆ ಮತ್ರೆ ಅವರ ರೂಂ ನಿಂದ 22000ರೂ. ಹಣ  ಸುನಿಲ್ ಟಿ. ಮತ್ರೆ ಅವರ ರೂಂ ನಿಂದ 33000ರೂ. ರೋಹಿಣಿ ತಾವರೆ ಎಂಬುವವರ ರೂಂ ನಿಂದ 25000ರೂ. ಗಳು ಕಳ್ಳತನವಾಗಿದೆ.  ಹೋಟೆಲ್ ನಲ್ಲಿ ಮಧ್ಯರಾತ್ರಿ ವೇಳೆಯಲ್ಲಿ ಕೆಲವು ವೆಯ್ಟರ್ ಮತ್ತು ಕೆಲಸಗಾರರು ಕೆಲಸ ಮಾಡುತ್ತಿದ್ದರು. ನಮಗೆ ಹೋಟೆಲ್ ನಲ್ಲಿ ಕೆಲಸ ಮಾಡುವವರ ಮೇಲೆ ಅನುಮಾನವಿದೆ ಎಮದು ದೂರಿನಲ್ಲಿ ತಿಳಿಸಿದ್ದಾರೆ.

ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: