
ಪ್ರಮುಖ ಸುದ್ದಿಮೈಸೂರು
ನ.17,18ರಂದು ಅಲ್ಟಿಮಾ ಲರ್ನಿಂಗ್ ಸೆಂಟರ್ ಅಲ್ಲಿ ಕಿಡ್ಸ್ ಫ್ಯಾಂಟಸಿ : ಚಿತ್ರಕಲಾ ಸ್ಪರ್ಧೆ
ಮೈಸೂರು,ನ.16 : ದಟ್ಟಗಳ್ಳಿ ಕನಕದಾಸ ನಗರದ ಅಲ್ಟಿಮಾ ಲರ್ನಿಂಗ್ ಸೆಂಟರ್ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಕಿಡ್ಸ್ ಫ್ಯಾಂಟಸಿ, ಗಾಯನ ವಾದನ ಹಾಗೂ ಚಿತ್ರಕಲಾ ಸ್ಪರ್ಧೆಯನ್ನ ಕೇಂದ್ರದಲ್ಲಿಯೇ ಏರ್ಪಡಿಸಲಾಗಿದೆ.
ನ.17 ಮತ್ತು 18ರಂದು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮೊದಲ ದಿನ ಸಂಜೆ 4ಕ್ಕೆ ಕಿಡ್ಸ್ ಫ್ಯಾಂಟಸಿ ಹಾಗೂ ಗಾಯನ ವಾದನ ಬುಗಲ್ ಬಂಧಿಗೆ ನಿವೃತ್ತ ಪೊಲೀಸ್ ಹಿರಿಯ ಅಧಿಕಾರಿ ಆರ್. ಆನಂದ್ ಚಾಲನೆ ನೀಡುವರು, ಮುಖ್ಯ ಅತಿಥಿಯಾಗಿ ವಿದ್ವಾನ್ ಎ.ವಿ.ದತ್ತಾತ್ರೇಯ ಇರಲಿದ್ದಾರೆ ಎಂದು ಸಂಸ್ಥೆ ಮುಖ್ಯಸ್ಥ ಡಾ.ನಾರಾಯಣ ಹೆಗಡೆ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಂತರ 4.30 ರಿಂದ ವಿದ್ವಾನ್ ಮಾನಸ ನಯನ ಅವರಿಂದ ಹಾಡುಗಾರಿಕೆ, ಶೃತಿ ವಾದ್ಯ ಸಂಗೀತ ವಿದ್ಯಾರ್ಥಿಗಳಿಂದ ಜುಗಲ್ ಬಂಧಿ ನಂತರ ಆಲ್ಟಿಮಾ ಸಂಗೀತಾ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಹಾಗೂ ಗಿಟಾರ್ ವಾದನವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ನ.18ರಂದು ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಮೇಳವನ್ನು ಏರ್ಪಡಿಸಿದ್ದು ಬೆಳಗ್ಗೆ 10 ಗಂಟೆಗೆ ವಿದ್ವಾನ್ ಎ.ವಿ.ದತ್ತಾತ್ರೇಯ ಚಾಲನೆ ನೀಡುವರು, ವಿದ್ವಾನ್ ರವಿಶಂಕರ್ ಮಿಶ್ರಾ ಅವರಿಂದ ಕೊಳಲು ವಾದನ, ವಿದ್ವಾನ್ ಪರಮೇಶ್ವರ ಹೆಗಡೆ ಅವರಿಂದ ತಬಲ ವಾದನವಿರಲಿದೆ, ಸಾಂಜಿ ಆರ್ಟ್ ಬಗ್ಗೆ ಅನುರಾಧ ಗಿರೀಶ್ ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಡಾ.ಶಿಲ್ಪಾ, ಕಲಾವಿದೆ ಅನುರಾಧ ಗಿರೀಶ್, ಧನವಾಲ್, ವಿದ್ವಾನ್ ವಿ.ಎ.ದತ್ತಾತ್ರೇಯ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)