ಪ್ರಮುಖ ಸುದ್ದಿಮೈಸೂರು

ಮೋದಿ ಜನಾಭಿವೃದ್ಧಿಗಾಗಿ ಏನೂ ಮಾಡಿಲ್ಲ: ಖಾದರ್ ಆರೋಪ

ಮೋದಿ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ. ಜನರ ಅಭಿವೃದ್ಧಿಗಾಗಿ ಯಾವುದೇ ಕಾರ್ಯ ಮಾಡಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಆರೋಪಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ನೋಟು ನಿಷೇಧದಿಂದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಹಣ ಪಡೆಯಲು ಹೋದ 70 ಜನ ಸರತಿಯ ಸಾಲಿನಲ್ಲಿ ನಿಂತು ಮರಣವನ್ನಪ್ಪಿದ್ದಾರೆ. ಸೌಜನ್ಯಕ್ಕೂ ಮೋದಿ ಈ ಕುರಿತು ಮಾತನಾಡಿಲ್ಲ. ಅವರಿಗೆ ಜನರ ಕುರಿತು ಕಾಳಜಿ ಇಲ್ಲ ಎಂದು ಕಿಡಿ ಕಾರಿದರು.

ನೋಟಿನ ಸಮಸ್ಯೆ 50 ದಿನವಾದರೂ ಬಗೆಹರಿದಿಲ್ಲ. ಮುಂದೆಯೂ ಬಗೆಹರಿಯಲ್ಲ ಎಂದು ತಿಳಿಸಿದರು. ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಎಪಿಎಲ್ ಕಾರ್ಡನ್ನು ಆನ್’ಲೈನ್ ನಲ್ಲಿ ಅರ್ಜಿ ಹಾಕಿ ಪಡೆಯಬಹುದಾಗಿದೆ. ಆನ್’ಲೈನ್’ನಲ್ಲಿ ಆಧಾರ್ ಕಾರ್ಡ್ ನಂಬರ್ ಜೋಡಿಸಿದರೆ ನಿಮಗೆ ಅದೇ ದಿನ ಪಡೆಯಬಹುದು. ಮತ್ತೆ 15 ದಿನಗಳ ನಂತರ ಪರಿಶೀಲನೆಗೊಂಡ ಅಧಿಕೃತ ಕಾರ್ಡ್ ನಿಮ್ಮ ಕೈಸೇರಲಿದೆ ಎಂದರು.

ಕೆಲವರು ಪಡಿತರ ಕೊಂಡೊಯ್ದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಕ್ಯಾಶ್ ಕೂಪನ್ ನೀಡಲಾಗುತ್ತಿದೆ. ಇದು ಈಗ ಸದ್ಯ ಮೈಸೂರು, ಮಂಗಳೂರು, ಬೆಂಗಳೂರಿನಲ್ಲಿ ಜಾರಿಯಲ್ಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: