ಪ್ರಮುಖ ಸುದ್ದಿಮೈಸೂರು

ಶ್ರೀರಾಮಾಯಣ ದರ್ಶನಂಗೆ ಉತ್ತಮ ಪ್ರತಿಕ್ರಿಯೆ

ಮೈಸೂರು,ನ.16 : ಅತಿ ಕುತೂಹಲ ಗಳಿಸಿದ್ದ ರಾಷ್ಟ್ರಕವಿ ಕುವೆಂಪು ವಿರಚಿತ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಆಧಾರಿತ ನಾಟಕ ಪ್ರದರ್ಶನ ಯಶಸ್ವಿಯಾಗಿದ್ದು. ನಾಟಕ ವೀಕ್ಷಿಸಲು  ಕಲಾ ಪ್ರೇಮಿಗಳು ಮುಗಿಬಿದ್ದಿದ್ದಾರೆ.

ಈ ಮಹಾಕಾವ್ಯವನ್ನು ರಂಗಾಯಣ ರಂಗರೂಪಕ್ಕೆ ಸಿದ್ಧಪಡಿಸಿದ್ದು,  ಕೆ.ಜಿ.ಮಹಾಬಲೇಶ್ವರ ಅವರ ನಿರ್ದೇಶಿಸಿದ್ದಾರೆ. ದಿ.15ರಿಂದ ನಾಟಕ ಪ್ರದರ್ಶನ ಆರಂಭವಾಗಿದ್ದು,  ದಿ.18ರವರೆಗೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರತಿ ದಿನ ಸಂಜೆ 6 ಗಂಟೆಯಿಂದ ನಡೆಯಲಿದೆ.

ಜಗದೀಶ ಮನೆವಾರ್ತೆ, ಕೃಷ್ಣಕುಮಾರ್ ನಾರ್ಣಕಜೆ ರಂಗರೂಪ ನೀಡಿದ್ದಾರೆ. ರವಿ ಮುರೂರು- ಸಂಗೀತ. ಹೆಚ್.ಕೆ.ದ್ವಾರಕಾನಾಥ್ ಅವರ ರಂಗವಿನ್ಯಾಸದಲ್ಲಿ ನಾಟಕ ಪ್ರದರ್ಶನಗೊಳುತ್ತಿದ್ದೆ, ಆನ್ ಲೈನ್ ಮುಖಾಂತರವು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು, ಇದಕ್ಕೆ ಕಲಾಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ  ಎಂದು ರಂಗಾಯಣದ ನಿರ್ದೇಶಕಿ ಭಗೀರಥಿ ಕದಂ ಪತ್ರಿಕಾ ಹೇಳಿಕೆ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: