ಮೈಸೂರು

ಇಬ್ಬರು ಮನೆಗಳ್ಳರು -ಮೂವರು ಬೈಕ್ ಕಳ್ಳರ ಬಂಧನ

ಮೈಸೂರು,ನ.16:-  ಮೈಸೂರಿನ ಉದಯಗಿರಿ ಠಾಣಾ  ಪೊಲೀಸರು ಭರ್ಜರಿ  ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರು ಮತ್ತು ಮೂವರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮೈಸೂರಿನ ಶಾಂತಿನಗರ ನಿವಾಸಿಗಳಾದ ಇರ್ಫಾನ್ (20)ನಯೀಮ್ (15)ಹಾಗೂ ತಬ್ರೇಜ್ (22) ಎಂದು ಗುರುತಿಸಲಾಗಿದೆ. ಮನೆ ಮುಂದೆ ನಿಲ್ಲಿಸಿರುವ ಬೈಕ್ ಗಳನ್ನು ನಕಲಿ ಕೀ ಬಳಸಿ ಕದಿಯುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಒಂದು ಲಕ್ಷ ಮೌಲ್ಯದ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಮನೆಗಳ್ಳರ ಬಂಧನ

ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸಲೀಂಮುಲ್ಲಾ (25) ಹಾಗೂ ಆಸೀಫ್ ಖಾನ್ (21) ಎಂದು ಗುರುತಿಸಲಾಗಿದೆ. ಶಕ್ತಿನಗರದ ಬಾಬು ಎಂಬುವರ ಮನೆ ಬಾಗಿಲು ಮುರಿದು 8ಸಾವಿರ ನಗದು ಎಗರಿಸಿದ್ದರು. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು  ಬಂಧಿಸಿ  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: