ಸುದ್ದಿ ಸಂಕ್ಷಿಪ್ತ

ನ. 24 ರಂದು ಅರಿವಿನ ಬೆಳಕು ಕಾರ್ಯಕ್ರಮ

ಮೈಸೂರು,ನ.17-ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಿಮ್ಮ ಮನೆಗೆ ನಮ್ಮ ಪುಸ್ತಕ ಬಂಧನದ ಮೈಮನಸುಗಳಿಗೆ ಅರಿವಿನ ಕಾರ್ಯಕ್ರಮ ಬೆಳಕು ನ.24 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆಯಲಿದೆ.

ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಆನಂದ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹೆಸರಾಂತ ಸಾಹಿತಿಗಳಾದ ಡಾ.ಕಾಳೇಗೌಡ ನಾಗವಾರ, ಖ್ಯಾತ ಮನೋವೈದ್ಯರು ಹಾಗೂ ವೈದ್ಯ ಸಾಹಿತಿಗಳಾದ ಡಾ.ಸಿ.ಆರ್. ಚಂದ್ರಶೇಖರ್,  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: