ಮೈಸೂರು

ನಮ್ಮದೇನೂ ನಡೆಯಲ್ಲ,ವರಿಷ್ಠರ ತೀರ್ಮಾನದಂತೆಯೇ ನಡೆದಿದೆ : ಸಚಿವ ಜಿ.ಟಿ.ದೇವೇಗೌಡ ಬೇಸರ

ಮೈಸೂರು,ನ.17:- ಮೈಸೂರಲ್ಲಿ ನಮ್ಮದೇನೂ ನಡೆಯಲ್ಲ. ಎಲ್ಲವೂ ವರಿಷ್ಠರ ತೀರ್ಮಾನದಂತೆಯೇ ನಡೆದಿದೆ.‌ಮೇಯರ್ ಆಯ್ಕೆ ವಿಚಾರವೂ ವರಿಷ್ಠರು ಹೇಳಿದಂತೆಯೇ ಆಗಿದೆ.  ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು  ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವರಿಷ್ಠರು ಹೇಳಿದ ಮೇಲೆ ಕೇಳಲೇಬೇಕು. ಅವರು ಹೇಳಿದ ಮೇಲೆ ಶಿರಬಾಗಿ, ತಲೆಬಾಗಿ ಒಪ್ಪಿಕೊಂಡಿದ್ದೇವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಮೂರು ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ನಾವು ಅವರಿಗೆ ಎರಡು ಸ್ಥಾನ ಬಿಟ್ಟುಕೊಟ್ಟಿದ್ದೆವು. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಚರ್ಚಿಸಲಾಗಿದೆ.ಆದ್ದರಿಂದ ಮೈಸೂರಿನಿಂದ ಉತ್ತಮ ಸಂದೇಶ ನೀಡಲು ಮೇಯರ್ ಸ್ಥಾನ ತ್ಯಾಗ ಮಾಡಿದ್ದೇವೆ.  ಮೇಯರ್ ಕಾಂಗ್ರೆಸ್ ಪಾಲಿಗೆ ಬಿಟ್ಟುಕೊಡಲು ವರಿಷ್ಠರು ಒಪ್ಪಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: