ಪ್ರಮುಖ ಸುದ್ದಿ

ಹೆತ್ತ ತಾಯಿಯ ಕತ್ತು ಕೊಯ್ದು ರುಂಡ ಬೇರ್ಪಡಿಸಿ ಕೊಲೆ ಮಾಡಿದ ಪಾಪಿ ಮಗ

ರಾಜ್ಯ(ರಾಮನಗರ)ನ.17:- ಕ್ಷುಲ್ಲಕ ಕಾರಣಕ್ಕೆ ತನ್ನ ಹೆತ್ತ ತಾಯಿಯ ಕತ್ತು ಕೊಯ್ದು ರುಂಡ ಬೇರ್ಪಡಿಸಿ ಕೊಲೆ ಮಾಡಿ ಪಾಪಿ ಮಗನೊಬ್ಬ ಪರಾರಿಯಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕು ಕರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕೋಡಂಬಹಳ್ಳಿ ಹೋಬಳಿಯ ಕರ್ಲಹಳ್ಳಿ ಗ್ರಾಮದ  ಪಾರ್ವತಮ್ಮ‌ ಎಂದು ಗುರುತಿಸಲಾಗಿದ್ದು,  ಆಕೆಯನ್ನು  ಮಗ ಕುಮಾರ (25), ಕೊಂದಿದ್ದಾನೆ.  ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ಆರೋಪಿ ಅಕ್ಕೂರು ಪೋಲಿಸ್ ಠಾಣೆಯಲ್ಲಿ ಶರಣಾಗಿದ್ದಾನೆ. 56 ವಯಸ್ಸಿನ ಪಾರ್ವತಮ್ಮನನ್ನು ಇಳಿವಯಸ್ಸಿನಲ್ಲಿ ರಾಣಿಯಂತೆ ನೋಡಿ ಕೊಳ್ಳಬೇಕಾದ ಮಗ 25ನೇ ವಯಸ್ಸಿನ ಕುಮಾರ  ಕೊಲೆಗೈದಿದ್ದಾನೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: