ಪ್ರಮುಖ ಸುದ್ದಿಮೈಸೂರು

ಡಿ.6ರಂದು ‘ಚರಂತಿ’ ಚಲನಚಿತ್ರ ರಾಜ್ಯಾದ್ಯಂತ ತೆರೆಗೆ

ಮೈಸೂರು,ನ.17 : ರಾವಲ್ ಸಿನಿ ಫೋಕಸ್ ನಿರ್ಮಾಣದ ‘ಚರಂತಿ’ ಪ್ರೇಮ ಪಯಣ ಸಿನಿಮಾ ಡಿ.6ರಂದು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರದ ನಾಯಕ ನಟ ರಾಹುಲ್ ರಾವಲ್ ತಿಳಿಸಿದರು.

ಡಾ.ಪರಶುರಾಮ್ ರಾವಲ್ ಚಿತ್ರ ನಿರ್ಮಾಪಕರಾಗಿದ್ದು, ಶಿವಾಜಿ ನಿಂಗೋಜಿ ಅವರ ಛಾಯಾಗ್ರಹಣ,  ವೆಂಕಿಯವರ ಸಂಕಲನ,  ಅವಿನಾಶ್ ಬಿ ಅವರು ಸಂಗೀತ ನೀಡಿದ್ದಾರೆ. ಚಿತ್ರದ ನಾಯಕಿಯಾಗಿ ಮಧು ಟಿಲ್ಕೇರ್, ತಾರಾಗಣದಲ್ಲಿ ಮಹೇಶ್ ರಾವಲ್, ರೇಖಾದಾಸ್, ಸದಾನಂದ ಕಾಳೆ, ಜಗದೀಶ್, ರಂಗಸ್ವಾಮಿ, ಕವನ ಮೊದಲಾದವರು ಇದ್ದಾರೆ.

ಬಾಗಲಕೋಟೆ, ಬೆಳಗಾವಿ, ಮುಂಬೈ ಹಾಗೂ ಪೂನಾಗಳಲ್ಲಿ ಚಿತ್ರೀಕರಣಗೊಂಡಿದೆ. ಸುಮಾರು 2 ಕೋಟಿ ರೂ ನಿರ್ಮಾಣ ವೆಚ್ಚತಗುಲಿದ್ದು, ರಾಜ್ಯದ 70 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು

.ಚಿತ್ರದ ನಾಯಕಿ ಮಧು ಟಿಲ್ಕೇರ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: