ದೇಶಪ್ರಮುಖ ಸುದ್ದಿ

ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಬಗ್ಗೆ ತಿಳಿಯಬೇಕಾದ ವಿಷಯಗಳು

ನವದೆಹಲಿ/ಬೆಂಗಳೂರು (ನ.17): ಮೊದಮೊದಲು ಸಣ್ಣ ಪ್ರಮಾಣದ ಹಣಕಾಸಿನ ಉಳಿತಾಯಕ್ಕೆ ಹೆಸರುವಾಸಿಯಾಗಿದ್ದ ಪೋಸ್ಟಾಫೀಸುಗಳು ಸೆಪ್ಟೆಂಬರ್ ಬಳಿಕ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ -ಐಪಿಪಿಬಿ ಹೆಸರಲ್ಲಿ ಕಾರ್ಯಾಚರಿಸುತ್ತಿವೆ.

ಇದೀಗ ಒಟ್ಟು ಮೂರು ವಿಧದ ಸೇವಿಂಗ್ಸ್ ಬ್ಯಾಂಕ್ ಖಾತೆಗಳು, ಡಿಜಿಟಲ್, ಬೇಸಿಕ್ ಮತ್ತು ಒಂದು ಕರೆಂಟ್ ಖಾತೆಗಳ ಸೌಲಭ್ಯಗಳು ಲಭ್ಯ ಎಂದು ಐಪಿಪಿಬಿ ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ತಿಳಿಸಿದೆ. ಐಪಿಪಿಬಿಯಲ್ಲಿ ಈ ನಾಲ್ಕು ವಿಧದ ಖಾತೆಗಳೂ ವಿತ್‍ಡ್ರಾವಲ್, ಬ್ಯಾಲೆನ್ಸ್ ಮಿತಿ ಸೇರಿದಂತೆ ವಿವಿಧ ಲಕ್ಷಣಗಳನ್ನು ಒಳಗೊಂಡಿರುತ್ತದೆ.

ಕಳೆದ ಸೆಪ್ಟೆಂಬರ್‍ನಲ್ಲಿ ಪೇಮೆಂಟ್ ಬ್ಯಾಂಕ್ ಅನ್ನು ಪ್ರಾರಂಭಿಸಿದ ಇಂಡಿಯಾ ಪೋಸ್ಟ್, ತನ್ನೆಲ್ಲಾ ಸೇವಿಂಗ್ಸ್ ಖಾತೆಗಳಿಗೆ ಶೇ.4ರಷ್ಟು ಸರಳ ಬಡ್ಡಿಯನ್ನು ನಿಗದಿಪಡಿಸಿದ್ದು ಎಲ್ಲವೂ ಝೀರೋ ಬ್ಯಾಲೆನ್ಸ್ ಆಕೌಂಟ್ ಆಗಿರಲಿವೆ. ಹೀಗಾಗಿ ಖಾತೆಯಲ್ಲಿ ಇಂತಿಷ್ಟೇ ಪ್ರಮಾಣದ ಉಳಿಕೆ ಹಣ ಇರಬೇಕೆಂದೇನಿಲ್ಲ. ಆದರೆ ಕರೆಂಟ್ ಅಕೌಂಟ್ ಮಾತ್ರ ಬಡ್ಡಿರಹಿತ ಅಕೌಂಟ್ ಆಗಿದ್ದು, ಪ್ರತಿ ತಿಂಗಳೂ ಕನಿಷ್ಠ 1000 ರೂಪಾಯಿ ಬ್ಯಾಲೆನ್ಸ್ ಇರಲೇಬೇಕು ಎಂದು ತಿಳಿಸಿದೆ.

ಇವುಗಳಲ್ಲಿ ರೆಗ್ಯುಲರ್ ಮತ್ತು ಬೇಸಿಕ್ ಸೇವಿಂಗ್ಸ್ ಅಕೌಂಟ್‍ಗಳನ್ನು ಐಪಿಪಿಬಿ ಅಕ್ಸೆಸ್ ಕೇಂದ್ರಗಳಲ್ಲೇ ತೆರೆಯಬೇಕಾಗುತ್ತದೆ. ಇದೇ ವೇಳೆ ಡಿಜಿಟಲ್ ಸೇವಿಂಗ್ಸ್ ಖಾತೆಯನ್ನು ಬ್ಯಾಂಕಿನ ಅಧಿಕೃತ ಆಪ್ ಆದ ಐಪಿಪಿಬಿ ಮೊಬೈಲ್ ಆ್ಯಪ್ ಮುಖಾಂತರ ತೆರೆಯುವ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ippbonline.com ನೋಡಬಹುದು. (ಎನ್.ಬಿ)

Leave a Reply

comments

Related Articles

error: