
ದೇಶ
ಜಯಲಲಿತಾ ಶವ ಪರೀಕ್ಷೆಗೆ ಸಹಮತವಿಲ್ಲವೆಂದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಈಚೆಗೆ ನಿಧನರಾದ ತಮಿಳರ ಪ್ರೀತಿಯ ಅಮ್ಮ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಹಿಂದೆ ಕಾಣದ ಕೈಗಳ ಕುತಂತ್ರವಿದ್ದು ಅವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಹಲವಾರು ಗಣ್ಯರು, ಪಕ್ಷದ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಂತೆ ಮದ್ರಾಸ್ ಹೈಕೋರ್ಟ್ ಶವಪರೀಕ್ಷೆ ನಡೆಸಬಾರದೇಕೆ ಎಂದು ಪ್ರಶ್ನಿಸಿದೆ.
ಹೈಕೋರ್ಟ್ನ ಈ ನಡೆಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಪ್ರತಿಕ್ರಿಯಿಸಿ, ಜಯಲಲಿತಾರಂತಹ ಗಣ್ಯರ ಶವವನ್ನು ಹೊರತೆಗೆಯುವುದು ಸರಿಯಲ್ಲ. ನಾನು ವೈಯುಕ್ತಕಿವಾಗಿ ಇದನ್ನು ವಿರೋಧಿಸುವೆ ಎಂದಿದ್ದಾರೆ.
ಜಯಾ ಸಾವಿನ ಸುತ್ತ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆಯಲು ಜಯಾ ಅವರ ಶವ ಪರೀಕ್ಷೆ ಅನಿವಾರ್ಯವೆಂಬ ಮದ್ರಾಸ್ ಹೈಕೋರ್ಟ್ ಅಭಿಪ್ರಾಯಕ್ಕೆ ತಮ್ಮ ಸಹಮತವಿಲ್ಲವೆಂದು ನಾಯ್ಡು ಸ್ಪಷ್ಟಪಡಿಸಿದ್ದಾರೆ.