ಕರ್ನಾಟಕ

ಜಮೀನುಗಳ ಸಮೀಕ್ಷೆ: ಆಕ್ಷೇಪಣೆ ಸಲ್ಲಿಸಲು ಮಂಡ್ಯ ಜಿಲ್ಲಾಧಿಕಾರಿ ಮನವಿ

ಮಂಡ್ಯ (ನ.17): ಬೆಳೆ ವಿಸ್ತೀರ್ಣದ ಅಂದಾಜು ಅಂಕಿ ಅಂಶಗಳ ಕ್ರೋಢೀಕರಣ ಕಾರ್ಯವನ್ನು ಗ್ರಾಮಲೆಕ್ಕಿಗರು, ಕೃಷಿ ಸಹಾಯಕರು ಮತ್ತು ಜಲ ಸಂಪನ್ಮೂಲ ಇಲಾಖೆಯ ಕಾರ್ಯ ತನಿಖಾಧಿಕಾರಿ ಈ ಮೂವರನ್ನು ಒಳಗೊಂಡ ತಂಡಗಳನ್ನು ನಿರ್ವಹಿಸಬೇಕಾಗಿದೆ. ಈ ಹಿನ್ನಲೆಯಲ್ಲಿ 2018ರ ಮುಂಗಾರು ಋತುವಿನಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಮೊಬೈಲ್ ಆ್ಯಪ್ ಮುಖಾಂತರ ಜಮೀನುಗಳ ಸಮೀಕ್ಷೆ ನಡೆಸಿ ಬೆಳೆಗಳ ಮಾಹಿತಿ ಸಂಗ್ರಹಿಸಿ ಇಂಡೀಕರಿಸುವಂತೆ ಸರ್ಕಾರದ ಆದೇಶವಾಗಿರುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ.

ಇ.ಡಿ.ಸಿ.ಎಸ್ ನಿದೇಶನಾಲಯದಿಂದ ರೈತರಿಗೋಸ್ಕರ ಹೊಸದಾಗಿ “ಬೆಳೆ ದರ್ಶಕ್” ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿ ಗೂಗಲ್ ಪ್ಲೇಸ್ಟೋರ್ ಮುಖಾಂತರ ಲಭ್ಯಗೊಳಿಸಲಾಗಿರುತ್ತದೆ. ಈ ಆ್ಯಪ್ ಮುಖಾಂತರ ರೈತರು ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಈಗಾಗಲೇ ಮುಗಿದಿದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಪಡೆಯಬಹುದಾಗಿರುತ್ತದೆ. ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದಲ್ಲಿ ದಾಖಲಾದ ಬೆಳೆ ವಿವರಗಳನ್ನು ಮತ್ತು ಬೆಳೆಗಳ ಪೋಟೋಗಳನ್ನು ವೀಕ್ಷಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ರೈತರು ತಮ್ಮ ಜಮೀನಿನಲ್ಲಿ ಕೈಗೊಂಡ ಬೆಳೆ ಸಮೀಕ್ಷೆ ಕಾರ್ಯದಲ್ಲಿ ನಮೂದಿಸಿರುವ ಮಾಹಿತಿಯು ತಪ್ಪು ಎಂದು ಕಂಡುಬಂದಲ್ಲಿ ಸದರಿ ಆ್ಯಪ್ ಮುಖಾಂತರವೇ ಆಕ್ಷೇಪಣೆ ಸಲ್ಲಿಸಬಹುದು ಅಥವಾ ತಾಲ್ಲೂಕು ಕಛೇರಿಯನ್ನು ಸಂಪರ್ಕಿಸಿ ಅಲ್ಲಿಯೂ ಕೂಡ ಆಕ್ಷೇಪಣೆ ಸಲ್ಲಿಸಬಹುದಾಗಿರುತ್ತದೆ. ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 31 ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: