
ಮನರಂಜನೆ
ಅಮೀರ್ ಖಾನ್ ‘ದಂಗಲ್’ ಚಿತ್ರ 400 ಕೋಟಿ ರೂಪಾಯಿ ದಾಟಿ ಗಳಿಕೆ
ಕ್ರಿಸ್ಮಸ್ ವೇಳೆ ಬಿಡುಗಡೆಗೊಂಡಿದ್ದ ಅಮೀರ್ಖಾನ್ ಅವರ ನೈಜ ಕಥೆಯಾಧಾರಿತ ‘ದಂಗಲ್’ ಚಿತ್ರ ವಿಶ್ವ ಗಳಿಕೆಯು 400 ಕೋಟಿ ರೂಪಾಯಿ ದಾಟುವ ಮೂಲಕ ನೂತನ ದಾಖಲೆ ನಿರ್ಮಿಸಿದೆ.
ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಪುತ್ರಿಯರಾದ ಗೀತಾ ಫೋಗಟ್ ಹಾಗೂ ಬಬಿತಾ ಅವರನ್ನು ವಿಶ್ವ ಮಟ್ಟದ ಕುಸ್ತಿಪುಟಗಳನ್ನಾಗಿಸಲು ತರಬೇತಿ ನೀಡಿ ತಯಾರಿ ಮಾಡುವ ನೈಜ ಕಥೆಯಾಧಾರಿತ ದಂಗಲ್ ಚಿತ್ರವೂ ದೇಶಾಧ್ಯಂತ ಉತ್ತಮ ಪ್ರದರ್ಶನ ಕಂಡು ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ದಂಗಲ್ ಚಿತ್ರವೂ ಇಲ್ಲಿಯವರೆಗೂ 270 ಕೋಟಿ ರೂಪಾಯಿ ಗಳಿಸಿದೆ. ಅಮೆರಿಕ ಮತ್ತು ಕೆನಡದಲ್ಲಿ 8.91 ದಶಲಕ್ಷ ಡಾಲರ್, ಯುಎಇ-ಜಿಸಿಸಿಯಲ್ಲಿ 5.81 ದಶಲಕ್ಷ ಡಾಲರ್ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ ಕ್ರಮವಾಗಿ 2.99 ಹಾಗೂ ಡ2.01 ದಶಲಕ್ಷ ಡಾಲರ್ ಗಳಿಸಿದೆ. ಅದರಂತೆ ವಿದೇಶಗಳಲ್ಲಿ 141.60 ಕೋಟಿ ಗಳಿಸಿದ್ದು ಒಟ್ಟು ಸೇರಿ 411 ಕೋಟಿ ರೂಗಳು ದಾಟಿದೆ.