
ಮೈಸೂರು
ಸಚಿವ ಮಹದೇವಪ್ರಸಾದ್ ನಿಧನಕ್ಕೆ ರಾಮದಾಸ್ ಸಂತಾಪ
ಸಕ್ಕರೆ ಮತ್ತು ಸಹಕಾರಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ನಿಧನಕ್ಕೆ ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಸಂತಾಪ ಸೂಚಿಸಿದ್ದಾರೆ.
ಹೆಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ಮರಣ ದುಃಖದಾಯಕ. ಮಹದೇವಪ್ರಸಾದ್ ಮತ್ತು ನಾನು ಜೆ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿಗಳಾಗಿ ಕಳೆದ ದಿನಗಳ ನೆನಪು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಿತ್ತು ಎನ್ನುವುದಕ್ಕೆ ಒಂದು ನಿದರ್ಶನ. ಎಲ್ಲರೊಂದಿಗೆ ಸ್ನೇಹಿಯಾಗಿದ್ದ ವ್ಯಕ್ತಿಯ ಸಾವು ಸಮಾಜಕ್ಕೆ ಮತ್ತು ರಾಜ್ಯಕ್ಕೆ ತುಂಬಲಾಗದ ನಷ್ಟ. ಅವರ ಕುಟುಂಬ ಮತ್ತು ಬಂಧು-ಮಿತ್ರರಿಗೆ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.