
ಮೈಸೂರು
ಮಾರ್ಷಲ್ ಆರ್ಟ್ ನಲ್ಲಿ ಕೀರ್ತಿ ತಂದ ಮೈಸೂರಿಗರು
ಮೈಸೂರು,ನ.17 : ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಜಿಯು-ಜಿಟ್ಟು ಚಾಂಪಿಯನ್ ಶಿಫ್ ಪಂದ್ಯಾವಳಿಯಲ್ಲಿ ಮೈಸೂರಿನ ಕಿಮುರಾ ಮಾರ್ಷಲ್ ಆರ್ಟ್ಸ್ ಅಂಡ್ ಫಿಟ್ ನೆಸ್ ಕ್ರೀಡಾಪಟುಗಳು ಭಾರತಕ್ಕೆ 2ನೇ ಹಾಗೂ ಏಷ್ಯಾ ಖಂಡಕ್ಕೆ 6ನೇ ಸ್ಥಾನ ಪಡೆದಿದ್ದಾರೆ.
ಕ್ರೀಡಾ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದರು. ಸಂಸ್ಥೆಯಿಂದ ಹೆಚ್.ಎನ್.ಕೈನಾಥ್ ಸಾನಿಯಾಜುನೈದ್, ಕೆ.ರಿಷಿಕಾ, ಎಂ.ಪಿ.ಶ್ರವಣ್, ಕೆ.ಅಕ್ಷಯ್, ನಮನ್ ಮುತ್ತಣ್ಣ, ವಿಶಾಲ್ ರೂಪೇಶ್, ಆರ್.ಡಿ.ಮಂಜು, ಕೆ.ಜಿ.ಪ್ರಜ್ವಲ್ ದೀಪ್, ಎಸ್.ಮಂಜು, ಎಸ್.ಜಸ್ವಂತ್, ಶಶಿಕುಮಾರ್ ಮೊದಲಾದವರು ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗಳಿಸುವ ಮೂಲಕ ಭಾರತಕ್ಕೆ 2ನೇ ಸ್ಥಾನ ಹಾಗೂ ಏಷ್ಯದಲ್ಲಿ 6ನೇ ಸ್ಥಾನ ಪಡೆದಿರುವುದು ಅಭಿನಂದನಾರ್ಹವೆಂದು ತರಬೇತುದಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. (ಕೆ.ಎಂ.ಆರ್)