
ದೇಶ
ಫೆ.1ರಂದು ಸಾಮಾನ್ಯ ಬಜೆಟ್ : ಜ.31 ರಿಂದ ಫೆ.9ರವರೆಗೆ ಸಂಸತ್ ಬಜೆಟ್ ಅಧಿವೇಶನ
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಜ.31ರಂದು ಭಾಷಣ ಮಾಡಲಿದ್ದು ಅಂದಿನಿಂದ ಫೆ.9ರವರೆಗೆ ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದೆ.
ಫೆ.1ರಂದು ಸಾಮಾನ್ಯ ಬಜೆಟ್ ಮಂಡನೆಯಾಗಲಿದ್ದು ಈ ಬಗ್ಗೆ ಮಂಗಳವಾರ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ರೈಲ್ವೆ ಹಾಗೂ ಸಾಮಾನ್ಯ ಬಜೆಟ್ ಅನ್ನು ಮಂಡಿಸುತ್ತಿರುವುದು ವಿಶೇಷವಾಗಿದೆ.
ಬಜೆಟ್ಗೂ ಮುನ್ನ ರಾಜ್ಯಗಳ ಸಲಹೆ ಪಡೆಯಲು ಹಣಕಾಸು ಸಚಿವ ಅರುಣ್ ಜೇಟ್ಲಿ ನಾಳೆ ಬಜೆಟ್ ಪೂರ್ವ ಸಲಹಾ ಸಭೆ ಕರೆದಿದ್ದಾರೆ.
ನೋಟು ಅಮಾನ್ಯದ ಹಿನ್ನೆಲೆಯಲ್ಲಿ ಕಳೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಮಹತ್ವಪೂರ್ಣ ಚರ್ಚೆ ನಡೆಯದೆ, ಕಾಯ್ದೆಗಳು ಮಂಡನೆ, ಅಂಗೀಕಾರವಾಗದೆ ಗದ್ದಲದಲ್ಲಿಯೇ ಕಳೆಯಲಾಗಿತ್ತು.