ಪ್ರಮುಖ ಸುದ್ದಿ

ಸಂಶೋಧನೆಗಳಿಗೆ ಬದುಕನ್ನು ಮೀಸಲಾಗಿಟ್ಟವರ ಪೈಕಿ ಡಾ. ಎಸ್. ವಿದ್ಯಾಶಂಕರ ಒಬ್ಬರು : ಶಿವರುದ್ರ ಸ್ವಾಮೀಜಿ

ರಾಜ್ಯ(ಬೆಂಗಳೂರು)ನ.19:-  ಸಂಶೋಧನೆಗಳಿಗೆ ಬದುಕನ್ನು ಮೀಸಲಾಗಿಟ್ಟವರ ಪೈಕಿ ಡಾ. ಎಸ್. ವಿದ್ಯಾಶಂಕರ ಒಬ್ಬರು ಎಂದು ಬೇಲಿಮಠ ಮಹಾಸಂಸ್ಥಾನದ ಶಿವರುದ್ರ ಸ್ವಾಮೀಜಿ ಸ್ಮರಿಸಿದರು.

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಡಾ.ಎಸ್.ವಿದ್ಯಾ ಶಂಕರ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ, ವಿದ್ಯಾಶಂಕರ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರದಾನ  ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಚನ ಸಾಹಿತ್ಯ ಏನು ಎಂಬುದನ್ನು ಅರ್ಥ ಮಾಡಿಕೊಂಡಾಗ,  ಬರೆದವರನ್ನು ಅರ್ಥ ಮಾಡಿಕೊಂಡಂತೇ ಆಗಲಿದೆ.ಈ ಹಾದಿಯಲ್ಲಿ ವಿಜಯಶಂಕರ ಸಾಗಿ,  ತಮ್ಮ ಜೀವನದುದ್ದಕ್ಕೂ ಸಂಶೋಧನೆಯನ್ನೇ  ಜೀವಾಳ ವಾಗಿಸಿಕೊಂಡು ಬದುಕಿದ್ದಾರೆ ಎಂದು ತಿಳಿಸಿದರು.

ಪ್ರತಿಷ್ಠಾನದ  ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಮಾತನಾಡಿ, ವಿದ್ಯಾಶಂಕರ ಅವರ ಅಂತರಂಗದಲ್ಲಿ ಶುದ್ಧತೆ ಇತ್ತು. ಅವರೊಬ್ಬರು ಹೃದಯವಂತ ವ್ಯಕ್ತಿಯಾಗಿದ್ದು, ನನ್ನ ವಿರುದ್ಧ ಚುನಾವಣೆಯಲ್ಲಿ ಸೋತು ಅಪ್ಪಿಕೊಂಡಿದ್ದರು ಎಂದು ನೆನಪು ಮಾಡಿಕೊಂಡರು.

ಆಧುನಿಕ ಜೀವನದ ಕುತೂಹಲ ಜೀವನವನ್ನು ಹಾಳುಮಾಡುತ್ತಿದೆ. ಅಧ್ಯಯನ ಶೀಲ ಸಂಶೋಧನೆಯನ್ನು  ಮರೆತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು, ಮೊಬೈಲ್ ಗಳಿಂದ, ನೋವಿನ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಜತೆಗೆ, ಸಂಬಂಧಗಳಿಗೆ ಮೌಲ್ಯ ನೀಡುತ್ತಿಲ್ಲ ಎಂದು ತಿಳಿಸಿದರು.

ಡಾ.ಎಸ್.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನದ ವಿದ್ಯಾಶಂಕರ ಪ್ರಶಸ್ತಿಯನ್ನು ಪ್ರೊ.ಸಿ.ಮಹಾದೇವಪ್ಪ ಹಾಗೂ ವಿದ್ಯಾಶಂಕರ ಪುರಸ್ಕಾರ- ಡಾ.ಎಸ್.ಎಸ್ ಅಂಗಡಿ ಅವರಿಗೆ ಪ್ರದಾನ ಮಾಡಲಾಯಿತು.

ಹಿರಿಯ ಸಂಶೋಧಕ ಪ್ರೊ.ಸಿ.ಮಹಾದೇವಪ್ಪ ಅವರಿಗೆ  ಪ್ರದಾನಿಸಿದ ವಿದ್ಯಾಶಂಕರ ಪ್ರಶಸ್ತಿಯು 25 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ. ಅದೇ ರೀತಿ, ಪುರಸ್ಕಾರವು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ನಿಡುಮಾಮಿಡಿ ಮಠದ ಸ್ವಾಮೀಜಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಕವಿ ಪ್ರೊ.ಎಸ್.ಜಿ.ಸಿದ್ಧಲಿಂಗಯ್ಯ,  ಹಿರಿಯ ಸಂಶೋಧಕ ಪ್ರೊ.ಸಿ.ಮಹಾದೇವಪ್ಪ, ಪ್ರೊ.ಜಿ.ಅಶ್ವತ್ಥ ನಾರಾಯಣ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಸೇರಿದಂತೆ ಪ್ರಮುಖರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: