ಮೈಸೂರು

ಅರವಳಿಕೆ ಇಂಜೆಕ್ಷನ್ ನಿಂದ ಯುವಕ ಕೋಮಾಸ್ಥಿತಿಗೆ : ವೈದ್ಯರ ವಿರುದ್ಧ ದೂರು

ನಮಗೆ ಏನಾದರೂ ಅನಾರೋಗ್ಯ ಕಾಡಿದರೆ ವೈದ್ಯರ ಮೊರೆ ಹೋಗುತ್ತೇವೆ. ಅದೇ ವೈದ್ಯರಿಂದಲೇ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾದರೆ ಮತ್ತೆಲ್ಲಿ ಹೋಗುವುದು..? ಮೈಸೂರಿನ ವೈದ್ಯರೋರ್ವರು ಇಂತಹ ಒಂದು ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ.

ಮೈಸೂರಿನ ಮಿಷನ್ ಆಸ್ಪತ್ರೆಯ ವೈದ್ಯರು ವ್ಯಕ್ತಿಯೋರ್ವರಿಗೆ ಕಿಡ್ನಿ ಆಪರೇಷನ್‍ಗೆ ಮೊದಲು ನೀಡಿದ ಅರವಳಿಕೆ ಇಂಜೆಕ್ಷನ್‍ನಿಂದ ಗಟ್ಟಿಮುಟ್ಟಾಗಿದ್ದ ಯುವಕ ಇದೀಗ ಜೀವಚ್ಛವವಾಗಿದ್ದಾರೆ. ಚಾಮರಾಜನಗರದ ಕೆಲಸೂರಿನ ಮಂಜುಸ್ವಾಮಿ ಎಂಬ ಯುವಕ ಕಿಡ್ನಿ ಸಮಸ್ಯೆ ಇದೆ ಎಂದು ಮೈಸೂರಿನ ಮಿಷನ್ ಆಸ್ಪತ್ರೆಗೆ ಬಂದಿದ್ದರು. ಆದರೆ  ವೈದ್ಯರ ಎಡವಟ್ಟಿನಿಂದ ಜೀವಂತ ಶವವಾಗಿದ್ದಾರೆ. ಸದ್ಯ ಈ ಯುವಕನ ಸ್ಥಿತಿಯನ್ನು ನೋಡಿದರೆ ಎಂಥವರ ಕರುಳಾದರೂ ಚುರುಕ್ ಎನ್ನದೆ ಇರದು.  22 ವರ್ಷದ ಮಂಜುಸ್ವಾಮಿಗೆ ಚೆಕಪ್ ಮಾಡಿದ ಮಿಷನ್ ಆಸ್ಪತ್ರೆ ವೈದ್ಯ ಸೋಮಶೇಖರ್, ಆಪರೇಷನ್ ಅಗತ್ಯ ಅಂತ ಹೇಳಿದ್ದರು. ಆಪರೇಷನ್‍ಗೆ ಮೊದಲು ಅವರೇ ಕೊಟ್ಟ ಅರವಳಿಕೆ ಇಂಜೆಕ್ಷನ್‍ನಿಂದಾಗಿ ಮಂಜುಸ್ವಾಮಿ ಇದೀಗ ಕೋಮ ಸ್ಥಿತಿ ತಲುಪಿದ್ದಾರೆ. ಈಗ ಮಂಜುಸ್ವಾಮಿ ಸಹಜ ಸ್ಥಿತಿಗೆ ಬರುವುದೇ ಕಷ್ಟ ಅಂತ ವೈದ್ಯರು ಹೇಳುತ್ತಿದ್ದಾರೆ.

ಮಂಜುಸ್ವಾಮಿಯ ಈ ಸ್ಥಿತಿಗೆ ಕಾರಣರಾದ ವೈದ್ಯರ ವಿರುದ್ಧ  ಕುಟುಂಬಸ್ಥರು ಮಂಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Reply

comments

Related Articles

error: