ಮನರಂಜನೆ

ಎಂಗೇಜ್ ಆದ ಸಿಸಿಎಲ್ ನ ಆಟಗಾರ ರಾಜೀವ್

ಬೆಂಗಳೂರು,ನ.19-ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಿಂದ ಹೆಚ್ಚು ಜಯಪ್ರಿಯತೆ ಪಡೆದುಕೊಂಡಿರುವ ರಾಜೀವ್ ಎಂಗೇಜ್ ಆಗಿದ್ದಾರೆ.

ಬೆಂಗಳೂರು ಮೂಲದ ರೇಷ್ಮಾ ಎಂಬುವರ ಜೊತೆ ರಾಜೀವ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಪೈವಿಸ್ತಾ ಕನ್ವೆಂಷನ್ ಹಾಲ್ ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಈ ಜೋಡಿಗೆ ಸ್ಯಾಂಡಲ್ ವುಡ್ ನ ಅನೇಕ ತಾರೆಯರು ಶುಭ ಹಾರೈಸಿದ್ದಾರೆ.

ರಾಜೀವ್ ಅವರ ಚಿತ್ರಗಳಿಗೆ ಮತ್ತು ವೃತ್ತಿ ಜೀವನದಲ್ಲಿ ಸದಾ ಬೆಂಬಲವಾಗಿ ನಿಂತಿರುವ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು, ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿ ನವಜೋಡಿಗಳಿಗೆ ಶುಭಹಾರೈಸಿದ್ದಾರೆ.

ಸುದೀಪ್ ಪೈಲ್ವಾನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು, ಬೆಂಗಳೂರಿನಲ್ಲಿ ಇಲ್ಲದ ಕಾರಣ ಟ್ವಿಟರ್ ಮೂಲಕ ರಾಜೀವ್ ಗೆ ಶುಭಕೋರಿದ್ದಾರೆ. ರಾಜೀವ್ ಅವರ ಆಪ್ತ ಸ್ನೇಹಿತ ಪ್ರದೀಪ್, ಕಿರುತೆರೆಯ ಖ್ಯಾತ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಸೇರಿದಂತೆ ಅನೇಕರು ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು.

ರಾಜೀವ್ ಮದುವೆಯಾಗಲಿರುವ ರೇಷ್ಮಾ ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಬೆಂಗಳೂರಿನ ಮೂಲದವರಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ರಾಜೀವ್ ಕನ್ನಡ ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ‘ಉಸಿರೇ ಉಸಿರೇ’ ಎಂಬ ಚಿತ್ರದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದರು. ಇನ್ನುಳಿದಂತೆ ‘ಅಮವಾಸ್ಯೆ’, ‘ಆರ್ ಎಕ್ಸ್ ಸೂರಿ’, ‘ಬೆಂಗಳೂರು 560023’, ‘ಜಿಂದಗಿ’ ಅಂತಹ ಚಿತ್ರಗಳಲ್ಲಿ ರಾಜೀವ್ ನಟಿಸಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ, ಕಿಚ್ಚ ಸುದೀಪ್ ನೇತೃತ್ವದಲ್ಲಿ ಕ್ರಿಕೆಟ್ ಆಡುತ್ತಿದ್ದ ರಾಜೀವ್ ಸಿನಿಮಾಗಿಂತ ಕ್ರಿಕೆಟ್ ನಲ್ಲೇ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: