
ಮೈಸೂರು
ಭೂ ಮಾಫಿಯಾದಿಂದ ಹಗಲು ದರೋಡೆ : ಕರವೇ ಮಾದೇಶ್ ಆರೋಪ
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಪಂಚಗವಿ ಮಠದ ಕಂದಾಯ ಭೂಮಿಯಲ್ಲಿ ಅಕ್ರಮ ಕಟ್ಟಡಗಳು ಪ್ರಾರಂಭವಾಗಿ ಭೂ ಮಾಫಿಯಾ ವ್ಯಕ್ತಿಗಳು ಹಗಲು ದರೋಡೆ ಮಾಡುತ್ತಿದ್ದರೂ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸುಮ್ಮನೆ ಕುಳಿತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕೆ. ಮಾದೇಶ್ ಆರೋಪಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೆ ನಂ 160, 161, 163, 162 ಈ ವ್ಯಾಪ್ತಿಗೆ ಬರುವ ವಾರ್ಡ್’ಗಳು ಸರ್ಕಾರಕ್ಕೆ ಸೇರಬೇಕಾದ ಆಸ್ತಿಯಾಗಿದೆ. ಇಲ್ಲಿ ಅಕ್ರಮವಾಗಿ ಕಳೆದ 8 ದಿನಗಳಿಂದ 45 ರಿಂದ 50 ಸೀಟ್ ಮನೆಗಳು ತಲೆ ಎತ್ತಿವೆ. ಇದಕ್ಕೆ ಪೂರಕವಾಗಿ ತಾಲೂಕು ಆಡಳಿತದ ಬೆಂಬಲವಿದೆ ಎಂದು ದೂರಿದರು. ಆದ್ದರಿಂದ ಇಲ್ಲಿ ಸರ್ಕಾರಿ ಸ್ವತ್ತು ಎಂದು ನಾಮಫಲಕ ಹಾಕಬೇಕು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಮಂಜುನಾಥ್, ಕುಮಾರ್ ಮತ್ತಿತರರು ಹಾಜರಿದ್ದರು.