ಮೈಸೂರು

ಪಕ್ಷದಿಂದ ವಜಾಗೊಳಿಸಲು ಒತ್ತಾಯ

ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಸಿ.ರವೀಂದ್ರ ಅವರಿಂದ ನನಗೆ ಕಿರುಕುಳವಾಗುತ್ತಿದೆ. ಆದ್ದರಿಂದ ಅವರನ್ನು ಪಕ್ಷದಿಂದ ವಜಾಗೊಳಿಸಿ ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ನಂಜನಗೂಡಿನ ನಿವಾಸಿ ನೀರಾವರಿ ಇಲಾಖೆಯ ನೌಕರ ರವಿ ಒತ್ತಾಯಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ. ರವೀಂದ್ರ ತನ್ನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲದೇ ತನಗೆ ಕಿರುಕುಳ ನೀಡುತ್ತಿದ್ದಾರೆ. ಅವರನ್ನು ಭಾರತೀಯ ಜನತಾ ಪಾರ್ಟಿಯಿಂದ ತಕ್ಷಣ ವಜಾಗೊಳಿಸಿ ಎಂದು ತಿಳಿಸಿದರು.

ಸುದ್ದಿಗೋಷ‍್ಠಿಯಲ್ಲಿ ಸೇನಾ ಸಮಿತಿಯ ಕುಮಾರ್, ಪ್ರಕಾಶ್ ನಾಯಕ್ ಹಾಜರಿದ್ದರು.

Leave a Reply

comments

Related Articles

error: