ಮೈಸೂರು

ದಲಿತ, ಹಿಂದುಳಿದ ರೈತ ವಿರೋಧಿ ಸರ್ಕಾರದ ವಿರುದ್ಧ ಪ್ರತಿಭಟನೆ

ಮೈಸೂರು,ನ.20:- ದಲಿತ, ಹಿಂದುಳಿದ ರೈತ ವಿರೋಧಿ ಸರ್ಕಾರದ ವಿರುದ್ಧ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಎಸ್ ಎಫ್ ಐ, ಪ್ರಗತಿಪರ ಚಿಂತಕರ ಸಂಘ, ಬಹುಜನ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಮಾನಸಗಂಗೋತ್ರಿಯಲ್ಲಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರದ ನೀತಿ, ನಿಯಮಗಳು ಶೋಷಿತ ಸಮುದಾಯಗಳಿಗೆ ಮರಣಶಾಸನಗಳಾಗಿ ಪರಿಣಮಿಸುತ್ತಿರುವುದು ದುರಂತವಾಗಿದೆ. ಕೆಪಿಎಸ್ ಸಿ ವಿಷಯದಲ್ಲಿ ಎಸ್ಸಿ/ಎಸ್ಟಿ, ಒಬಿಸಿ ಅಭ್ಯರ್ಥಿಗಳು ಆಯಾ ಜಾತಿಯ ಮೀಸಲಾತಿಯಲ್ಲಿಯೇ ಪರಿಗಣಿಸಬೇಕೆಂದು ಅವರು ಎಷ್ಟೇ ಉತ್ತಮ ಅಂಕಗಳಿದ್ದರೂ ಅವರಿಗೆ ಜಿಎಮ್ ನಲ್ಲಿ ಪರಿಗಣಿಸಬಾರದೆಂಬ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಕಾನೂನು ಮಾಡಿಯೂ ಜಾರಿ ಮಾಡಿ ಅನ್ಯಾಯ ಮಾಡುತ್ತಿರುವ ಬಡ್ತಿ ಮೀಸಲಾತಿ ಕಾಯ್ದೆಯಿಂದ ವಂಚನೆಗೊಳಗಾಗಿರುವ ಎಸ್ಸಿ/ಎಸ್ಟಿ ನೌಕರರ ಹಿತ ಕಾಯಬೇಕು. ಮಣ್ಣಿನ ಮಕ್ಕಳೆಂದು ಹೇಳಿ ಅಧಿಕಾರಕ್ಕೆ ಬಂದು ರೈತ ಸಮುದಾಯದ ವಿರುದ್ಧ ಮಾತನಾಡುವುದನ್ನು ಬಿಟ್ಟು ಕಬ್ಬು ಬೆಳೆಗಾರರಿಗೆ ಬೆಂಬಲ ನೀಡಿ ಬಾಕಿ ಪಾವತಿಸಿ ಅವರ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಮಹೇಶ್ ಸೋಸ್ಲೆ, ಗೋಪಾಲ್, ವಸಂತ್ ಕಲಾಲ್ ಮೂರ್ತಿ, ಸಂದೀಪ್, ಕಿರಣ್, ರಮೇಶ್, ಚಂದ್ರಪ್ಪ, ಕೈಲಾಶ್, ಶಿವಕುಮಾರ್, ವಸಂತ್, ಶಿವಮೂರ್ತಿ, ಶಿವಶಂಕರ್, ನಾಗೇಮದ್ರ, ನವೀನ್ ಮೂರ್ತಿ ಮತ್ತಿತರರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: