ಮೈಸೂರು

ಜಿ.ಪಂ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಯೀಮಾ ಸುಲ್ತಾನ್ ನಜೀರ್ ಅಹ್ಮದ್

ಮೈಸೂರು,ನ.20:-  ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೆಡಿಪಿ ಸಭೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಹೀಮಾ‌ ಸುಲ್ತಾನ್ ನಜೀರ್ ಅಹ್ಮದ್ ನೇತೃತ್ವದಲ್ಲಿ ಆರಂಭಗೊಂಡಿತು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿ‌ಯಾಗಿದ್ದರು. ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ನಹೀಮಾ ಸುಲ್ತಾನ್ ನಜೀರ್ ಅಹ್ಮದ್ ಅವರು ನೀವು ಹಳ್ಳಿಗಳಿಗೆ ಭೇಟಿ ನೀಡುವಾಗ ನಮಗೆ ತಿಳಿಸಿ. ನಾವೂ ಸಹ ನಿಮ್ಮ ಜೊತೆ  ಬಂದು ನಿಮ್ಮ‌ಅಭಿವೃದ್ಧಿ ವಿಕ್ಷೀಸುತ್ತೇವೆ. ನೀವು ಒಳ್ಳೆಯ ಕೆಲಸ ಮಾಡಿದರೆ ರೈತರ ಬದಲು ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿ ತೊಂದರೆಗಳಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

ಎಲ್ಲಾ ತಾಲೂಕಿನಲ್ಲೂ ಮಕ್ಕಳ‌ ಗ್ರಾಮ‌ ಸಭೆ ನಡೆಸಿದ್ದೇವೆ. ಶಾಲೆಗೆ ಹೆಚ್ಚು ಮಕ್ಕಳನ್ನು ಸೆಳೆಯಲು ಸಭೆಗಳನ್ನು ನಡೆಸುತ್ತಿದ್ದಾರೆ. ಎಚ್.ಡಿ.ಕೋಟೆಯ ಶಾಲೆಯಲ್ಲಿ ಶೂ ನೀಡಿಲ್ಲ ಎಂದು ವರದಿಯಾಗಿತ್ತು. ಆ ಶಾಲೆಯ ಮುಖ್ಯೋಪಾಧ್ಯಾಯರು 47 ಮಕ್ಕಳಿಗೆ ಶೂ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳಿಗೆ ಬೈಸಿಕಲ್ ಸರಿಯಾಗಿ ಎಲ್ಲಾ ಕಡೆ ತಲುಪುತ್ತಿದೆಯಾ? ಎಲ್ಲೂ ಬೈಸಿಕಲ್ ದುರ್ಬಳಕೆ ಯಾಗಿಲ್ವ. ಇದರ ಬಗ್ಗೆ ಎಲ್ಲಾದರೂ ವರದಿಯಾಗಿದೆಯಾ. ಬೈಸಿಕಲ್ ದುರ್ಬಳಕೆ ಆಗದಂತೆ ಗಮನ ಹರಿಸಿ ಎಂದು ಡಿಡಿಪಿಐ ಮಮತಾಗೆ ಜಿಪಂ‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಜ್ಯೋತಿ ಸೂಚನೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: