ಮನರಂಜನೆ

‘ನಟ ಸಾರ್ವಭೌಮ’ದ ಪುನೀತ್ ಎಂಟ್ರಿ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ

ಬೆಂಗಳೂರು (ನ.20): ಗಾಯಕ ಸಂಚಿತ್ ಹೆಗ್ಡೆ ಇದೀಗ ನಟ ಪುನೀತ್ ಸಿನಿಮಾದ ಒಂದು ಹಾಡಿಗೆ ಸಂಚಿತ್ ಧ್ವನಿ ನೀಡಿದ್ದಾರೆ. ಸಂಚಿತ್ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿಯೂ ಅವರು ಹಾಡಿದ್ದಾರೆ.

‘ನಟ ಸಾರ್ವಭೌಮ’ ಸಿನಿಮಾದ ಇಂಟ್ರೊಡಕ್ಷನ್ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಜೊತೆಗೆ ‘ಟಗರು’ ಖ್ಯಾತಿಯ ಅಂಟೋನಿ ದಾಸ್ ಸಹ ಹಾಡನ್ನು ಹಾಡಿದ್ದಾರೆ. ಡಿ ಇಮಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‘ನಟ ಸಾರ್ವಭೌಮ’ ಚಿತ್ರದ ಹಾಡಿನ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಅದ್ಧೂರಿ ಸೆಟ್ ಗಳ ಮೂಲಕ ದೊಡ್ಡ ಮಟ್ಟದಲ್ಲಿ ಹಾಡನ್ನು ಶೂಟಿಂಗ್ ಮಾಡುತ್ತಿದ್ದಾರೆ. ರಾಕ್ ಲೈನ್ ಚಿತ್ರದ ನಿರ್ಮಾಪಕರಾಗಿದ್ದಾರೆ.

ಸಂಚಿತ್ ಹೆಗ್ಡೆ ಹಾಡಿಗೆ ಈಗಾಗಲೇ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇಬ್ಬರೂ ಫಿದಾ ಆಗಿದ್ದರು. ಇತ್ತೀಚಿಗಷ್ಟೆ ಸಂಚಿತ್ ಹಾಡಿದ್ದ ‘ಲಂಬೋದರ’ ಚಿತ್ರದ ಹಾಡನ್ನು ಅಪ್ಪು ರಿಲೀಸ್ ಮಾಡಿದ್ದರು. ಅದರ ಹಿಂದೆಯೇ ಈಗ ಪುನೀತ್ ಚಿತ್ರಕ್ಕೆ ಸಂಚಿತ್ ಹಾಡಿರೋ ಸುದ್ದಿ ಹೊರ ಬಂದಿದೆ.

‘ನಟ ಸಾರ್ವಭೌಮ’ದಲ್ಲಿ ಪವನ್ ಒಡೆಯರ್ ಎರಡನೇ ಬಾರಿ ಪುನೀತ್‍ಗೆ ನಿರ್ದೇಶನ ಮಾಡುತ್ತಿದ್ದಾರೆ. ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಸಿನಿಮಾದ ನಾಯಕಿಯಾರಾಗಿದ್ದಾರೆ. (ಎನ್.ಬಿ)

Leave a Reply

comments

Related Articles

error: