ಮೈಸೂರು

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಕೊಲೆ : ಕಾಮುಕರ ಬಂಧನಕ್ಕೆ ಒತ್ತಾಯ

ಮೈಸೂರು, ನ.20:-  ನಂಜನಗೂಡು ಪಟ್ಟಣದ ಚಾಮಲಾಪುರಹುಂಡಿ ನಿವಾಸಿ ಬಡ ಕೂಲಿ ಕಾರ್ಮಿಕರಮಗಳು  ಅಪ್ರಾಪ್ತ  ಬಾಲಕಿ ಮೇಲೆ ದುಷ್ಕರ್ಮಿಗಳು ಹಾಡು ಹಗಲೇ ಇತ್ತೀಚೆಗಷ್ಟೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, ಕಾಮುಕರನ್ನು ಬಂಧಿಸಿ ,ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು. ಇಂತಹ ವಿಕೃತ ಕಾಮುಕರ ಪರವಾಗಿ ನ್ಯಾಯವಾದಿಗಳು ವಕಾಲತ್ತು ವಹಿಸಬಾರದು ಎಂದು ಒತ್ತಾಯಿಸಿ ಜನ ಸಂಗ್ರಾಮ ಪರಿಷತ್ ಹಾಗೂ ದಲಿತ ಸಂಘರ್ಷ ಸಮಿತಿ ಮಹಿಳಾ ಸಂಘಟನೆ ಹಾಗೂ ವಿದ್ಯಾರ್ಥಿ ಸಂಘಟನೆ ಗ್ರಾಮೀಣ ಅಭ್ಯುದಯ ಸ್ವಯಂ ಸೇವಾ ಸಂಘಟನೆ ಹಾಗೂ ಇನ್ನಿತರ ಪ್ರಗತಿಪರ ಒಕ್ಕೂಟಗಳ ಜೊತೆಗೂಡಿ ಪ್ರತಿಭಟನೆ ನಡೆಸಿದವು.

ನಿನ್ನೆ ನಂಜನಗೂಡು ಪಟ್ಟಣದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಖಾಸಗಿ ಬಸ್ ನಿಲ್ದಾಣ, ರೈಲ್ವೆ ಅಂಡರ್ ಪಾಸ್, ಕೆ.ಎಸ್.ಆರ್.ಟಿ.ಸಿ‌. ಬಸ್ ನಿಲ್ದಾಣದ ಮುಖಾಂತರ ಹುಲ್ಲಹಳ್ಳಿ ಸರ್ಕಲ್ ವರೆಗೆ ಮೆರವಣಿಗೆ ಹೊರಟು ಅಲ್ಲಿ ಜಮಾವಣೆಗೊಂಡು ತಾಲೂಕು ಅಡಳಿತ ಹಾಗೂ ಜಿಲ್ಲಾಡಳಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ನತದೃಷ್ಟ ಐಶ್ವರ್ಯಳಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥ ಅತ್ಯಾಚಾರಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನಾ ರ್ಯಾಲಿಯಲ್ಲಿ ಜನ ಸಂಗ್ರಾಮ ಪರಿಷತ್ ಮೈಸೂರು ವಿಭಾಗೀಯ ಕಾರ್ಯದರ್ಶಿ ನಗರ್ಲೆ ಎಂ.ವಿಜಯ್ ಕುಮಾರ್ ರಾಜ್ಯ ಉಪಾಧ್ಯಕ್ಷ ಪ್ರಸನ್ನ ಸಂಘಟನಾ ಕಾರ್ಯದರ್ಶಿ ಗೀತಾವೇಲುಮಣಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ,, ದೇವೇಂದ್ರ, ಕ್ರೆಡಿಟ್ ಐ ಸಂಸ್ಥೆಯ ಡಾ.ಎಂ.ಪಿ.ವರ್ಷ, ವಿದ್ಯಾರ್ಥಿ ಸಂಘಟನೆಯ ಬಕ್ಕಳ್ಳಿ ಆಕಾಶ್ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.  ಸ್ಥಳಕ್ಕೆ ಆಗಮಿಸಿದ ನಂಜನಗೂಡು ಪಟ್ಟಣದ ಡಿ.ವೈ ಎಸ್.ಪಿ‌. ಮಲ್ಲಿಕ್, ಹಾಗೂ ಉಪ ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: