ಕರ್ನಾಟಕ

ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಹಾಸನ (ನ.20): ಅಲ್ಪಸಂಖ್ಯಾತರ ಸಮುದಾಯಗಳಾದ (ಬೌದ್ಧ, ಪಾರ್ಸಿ, ಸಿಖ್, ಜೈನ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ) ಭಾರತಿಯ ಭೂ ಸೇನೆ, ನೌಕಾದಳ, ವಾಯುದಳ ಮತ್ತು ಇತರೆ ರಕ್ಷಣಾ ದಳಗಳಿಗೆ ಸೇರಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ಜೊತೆಗೆ 45 ದಿನಗಳ ಉಚಿತ ಪೂರ್ವಭಾವಿ ತರಬೇತಿ ಮತ್ತು ಮಾರ್ಗದರ್ಶನಕ್ಕಾಗಿ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿ ಸಂಸ್ಥೆಯ ಪ್ರತಿಯೊಬ್ಬ ಅಭ್ಯರ್ಥಿಗೆ 45 ದಿನಗಳ ಅವಧಿಗೆ ಅಂದರೆ ತರಬೇತಿ ಅವಧಿಯಲ್ಲಿ ವಿಮೆ ಸೌಲಭ್ಯವಿರುವುದು. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಸ್ಟೈಪೆಂಡ್ ನೀಡುವುದಿಲ್ಲ, ತರಬೇತಿಯನ್ನು ಒಮ್ಮೆ ಮಾತ್ರ ನೀಡಲಾಗುವುದು. ಅರ್ಜಿಸಲ್ಲಿಸಲು ಡಿ. 15 ರಂದು ಕಡೆಯ ದಿನವಾಗಿರುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆ: ಅಭ್ಯರ್ಥಿಯು ಭಾರತದ ಪ್ರಜೆಯಾಗಿದ್ದು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು, ವಿದ್ಯಾರ್ಥಿಗಳು ಮತೀಯ ಅಲ್ಪಸಂಖ್ಯಾತರಾದ (ಬೌದ್ಧ, ಪಾರ್ಸಿ, ಸಿಖ್, ಜೈನ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ) ಸಮುದಾಯಕ್ಕೆ ಸೇರಿರಬೇಕು, ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರ ತರಬೇತಿ ಸೌಲಭ್ಯವನ್ನು ಒದಗಿಸಲಾಗುವುದು, ಸದರಿ ತರಬೇತಿಗೆ ನಿಗದಿತ ಶೈಕ್ಷಣಿಕ, ದೈಹಿಕ ಅರ್ಹತೆಯನ್ನು ಹೊಂದಿರುವುದು.

ಅರ್ಜಿ ಸಲ್ಲಿಸುವ ವಿಧಾನ:- ವಿದ್ಯಾರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿಸಲ್ಲಿಸಬೇಕು. ಅರ್ಜಿ ಅಲ್ಲಿಸಲು ಆನ್‍ಲೈನ್ ಅರ್ಜಿ ಫಾರಂನ ಪ್ರಿಂಟ್‍ಔಟ್‍ಅನ್ನು ಅಗತ್ಯವಾದ ದಾಖಲೆ ಪತ್ರಗಳನ್ನು (ಜೊತೆಗೆ ಸಂಬಂಧಪಟ್ಟ ಜಿಲ್ಲೆಯ ವಾಸವಿರುವ ಜಿಲ್ಲೆ) ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಾಸನ ಇಲ್ಲಿಗೆ ಡಿ. 15ರೊಳಗೆ ಸಲ್ಲಿಸತ್ತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ/ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಶ್ರೀ ವಿದ್ಯಾಗಣಪತಿ ದೇವಸ್ಥಾನದ ಅಡ್ಡ ರಸ್ತೆ, ಆಕಾಶವಾಣಿ ಹಿಂಭಾಗ, ಸಾಲಗಾಮೆ ಮುಖ್ಯ ರಸ್ತೆ, ಹಾಸನ- 573202 – ಈ ವಿಳಾಸ ಅಥವಾ ಕಚೇರಿ ದೂರವಾಣಿ ಸಂಖ್ಯೆ: 08172-267373, 08172-268373 ಅನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: