ಪ್ರಮುಖ ಸುದ್ದಿ

ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ

ರಾಜ್ಯ(ಚಾಮರಾಜನಗರ) 21:- ಮಕ್ಕಳಿಗೆ ಕಾನೂನು ರೀತಿಯಲ್ಲಿ ಸೇರಬೇಕಾದ ಸೌಲಭ್ಯಗಳನ್ನು ನೀಡಬೇಕು. ಮಕ್ಕಳಿಗೆ ಶಿಕ್ಷಣ ಬಹಳಮುಖ್ಯ ವಾಗಿದೆ. ಮಕ್ಕಳನ್ನು ಕಾರ್ಖಾನೆ, ಹೋಟಲ್, ಅಂಗಡಿಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳಬಾರದು. ಇದು ಕಾನೂನು ಅಪರಾಧ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಜೆ.ವಿಶಾಲಕ್ಷಿ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಹಾಗೂ ಸ್ವಂದನ ಮಟ್ರಿಕ್ ನಂತರ ವಿದ್ಯಾರ್ಥಿ ನಿಲಯ, ಚಾಮರಾಜನಗರ ಇವರ ಸಂಯುಕ್ತಾಶ್ರಯದಲ್ಲಿ ನಡೆದ “ಮಕ್ಕಳ ಹಕ್ಕುಗಳ ದಿನಾಚರಣೆ ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿರು. ಬಾಲ್ಯವಿವಾಹ, ಅಸ್ಪತ್ರೆಗಳಲ್ಲಿ ಗರ್ಭಪಾತಮಾಡುವುದು, ಮಕ್ಕಳ ಮೇಲೆ ದರ್ಬಳಿಕೆ ಮಾಡುವುದು, ಇವೆಲ್ಲವು ಕಾನೂನುರೀತಿಯ ಅಪರಾಧವಾಗುತ್ತದೆ. ವಿದ್ಯಾರ್ಥಿಗಳು ಸ್ವಲ್ಪವಾದರು ಕಾನೂನುಗಳನ್ನು ತಿಳಿದಿರಬೇಕು ಎಂದು ತಿಳಿಸಿದರು.

ಪ್ರತಿ ನವೆಂಬರ್ 20ರಂದು ಮಕ್ಕಳ ಹಕ್ಕುಗಳ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದೇವೆ ಮಕ್ಕಳಿಗೆ ಬದುಕುವ ಹಕ್ಕು ಇದೆ. ಮಗು ಹುಟ್ಟುವ ಮುಂಚೆ ಭ್ರೂಣ ಹತ್ಯೆ ಆಗುತ್ತಿದೆ. ಮಗು ಹೆಣ್ಣಾಗಿದ್ದರೆ ಸಾಯಿಸಿರುವ ಸನ್ನಿವೇಶಗಳು ಇವೆ. ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ. ಬದುಕುವ ಹಕ್ಕನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ, ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದರೆ ಕಾನೂನಿನಲ್ಲಿ ಜೈಲು ಶಿಕ್ಷೆ ನೀಡಲಾಗುವುದು ಎಂದು ತಿಳಿದರು

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಲೇಬೇಕು. ಆಟಗಳನ್ನು ಆಡಲು ಬಿಡಬೇಕು.  ದೈಹಿಕವಾಗಿ ಹಾಗೂ ಮಾನಸಿಕವಾಗಿ ಬೆಳೆಯಲು ಆಹಾರಗಳನ್ನು ನೀಡಬೇಕು. ಸಾಂಸ್ಕೃತಿವಾಗಿ ಬೆಳೆಯಲು ಸಂಘಟನೆಗಳಲ್ಲಿ ಗುರುತಿಸಿಕೊಳ್ಳಲು ಮಕ್ಕಳಿಗೆ ಅವಕಾಶವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಕ್ಕಳಿಗಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಉಚಿತ ಶಿಕ್ಷಣ ಹಾಗೂ ಉಚಿತ ಊಟದ ಸೌಲಭ್ಯ ಮತ್ತು ಸಮವಸ್ತ್ರಗಳ ವಿತರಣೆ, ಆಸ್ಪತ್ರೆಯ ವೆಚ್ಚವನ್ನು ನೀಡುತ್ತಲೆ ಬಂದಿದೆ.  ಇದರ ಉಪಯೋಗಗಳನ್ನು ಮಕ್ಕಳು ಪಡೆದು ಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದೂ ಶೇಖರ್ ಮಾತನಾಡಿ ನಮ್ಮ ದೇಶದಲ್ಲಿ ಮಕ್ಕಳ ಬಗ್ಗೆ ಬಲವಾದ ಕಾನೂನುಗಳು ಇವೆ. ಮಕ್ಕಳನ್ನು ಓದುವ ವಯಸ್ಸಿನಲ್ಲಿ ದುಡಿಯುವ ಕೆಲಸಗಳಿಗೆ ಬಳಸಿಕೊಳ್ಳುವು ಅಪರಾಧ. ಇದನ್ನು ತಡೆಯಲು ಸರ್ಕಾರಗಳು ಎಚ್ಚರಿಕೆ ವಹಿಸಬೇಕಿದೆ.  ನಮ್ಮ ಸಂವಿಧಾನದಲ್ಲಿ 3500ಕ್ಕೂ ಹೆಚ್ಚು ಕಾನೂನುಗಳಿವೆ. ಎಲ್ಲವನ್ನೂ ತಿಳಿಯಲು ಸಾಧ್ಯವಿಲ್ಲ. ಸ್ವಲ್ಪಮಟ್ಟಿಗಾದರು ನಮಗೆ ಬೇಕಾಗುವ ಕಾನೂನುಗಳನ್ನು ತಿಳಿದಿರಬೇಕು. ಕಾನೂನು ಪ್ರತಿಯೊಬ್ಬರಿಗೂ ಒಂದೇ.  ಬಡವ,ಶ್ರೀಮಂತ ಎನ್ನುವ ಭೇದ,ಭಾವವಿಲ್ಲ ಎಂದು ತಿಳಿಸಿದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅರುಣ್‍ಕುಮಾರ್ ಮಾತನಾಡಿ ಮಕ್ಕಳಿಗೆ ಪೋಷಕರು ಶಿಕ್ಷಣವನ್ನು ನೀಡದಿದ್ದರೆ ಅವರಿಗೂ ಕಾನೂನು ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳಬಹುದು. ಸರ್ಕಾರದ ವತಿಯಿಂದ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆದುಕೊಂಡು ಬಂದು ಶಿಕ್ಷಣವನ್ನು ನೀಡುವ ಸೌಲಭ್ಯಗಳು ಇವೆ. ಯಾವುದೇ ಮಕ್ಕಳು ಶಿಕ್ಷಣ ಕಲಿಯ ಬೇಕಾದರೆ ಶಾಲೆಗಳ ಕೊಠಡಿ, ಕಿಟಕಿಗಳು ವಿಶಾಲವಾಗಿರಬೇಕು ಮಕ್ಕಳಿಗೆ ಬೆಳಕು ಬರುವಂತೆ ಇರಬೇಕು. ಕತ್ತಲೆ ರೂಮ್ ನಲ್ಲಿ ಶಿಕ್ಷಣ ನೀಡುವುದು ಅಪರಾಧ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಲ ನ್ಯಾಯಮಂಡಳಿ ಸದಸ್ಯ ಸುರೇಶ್ ವಿದ್ಯಾರ್ಥಿಗಳಿಗೆ ಕಾನೂನಿ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಸ್ಪಂದನ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯದ ವಾರ್ಡನ್ ಹೇಮಾವತಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: