
ಮೈಸೂರು
ಬಸ್-ಬೈಕ್ ಮುಖಾಮುಖಿ ಢಿಕ್ಕಿ : ತಂದೆ-ಮಗ ಸಾವು
ಮೈಸೂರಿನಲ್ಲಿ ಮಂಗಳವಾರ ಸಾಯಂಕಾಲ ಬಸ್ ಮತ್ತು ಬೈಕ್’ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಓಡಿಶಾ ಮೂಲದ ಕೀರ್ತನ್ (55) ಹಾಗೂ ತುಲಾರಾಮ(32) ಎಂದು ಗುರುತಿಸಲಾಗಿದೆ. ಬಸ್ ಕೆ.ಆರ್.ನಗರದಿಂದ ಬಿಳಿಕೆರೆಗೆ ಹೋಗುವಾಗ ಎದುರಿನಿಂದ ಬೈಕ್ ಮುಖಾಮುಖಿಯಾಗಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ತಂದೆ-ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಳಿಕೆರೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.