ಪ್ರಮುಖ ಸುದ್ದಿಮೈಸೂರು

ನ.25ರಂದು ಟಿಪ್ಪು ಜಯಂತಿ – ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನಾ ಸಮಾರಂಭ

ಮೈಸೂರು, ನ.21 : ಮೈಸೂರು ವಿಭಾಗೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೇಂದ್ರೀಯ ರಾಜ್ಯ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಸಂಸ್ಥೆಗಳ ಅಧಿಕಾರಿಗಳ ಮತ್ತು ನೌಕರರ ಪರಿಷತ್ ಆಶ್ರಯದಲ್ಲಿ ನ. 25 ರಂದು ನಗರದಲ್ಲಿ ಟಿಪ್ಪು ಜಯಂತಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಭಿನಂದನಾ ಸಮಾರಂಭ ಹಾಗೂ ಪ್ರೊ.ಟಿ.ಎಂ. ಮಹೇಶ್ ಅವರ ಕರ್ನಾಟಕ ರಾಜ್ಯದ ಅನ್ನಭಾಗ್ಯ ಯೋಜನೆ ಮತ್ತು ಆಹಾರ ಭದ್ರತೆ ಕೃತಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಗೌರವಾಧ್ಯಕ್ಷ ಶಾಂತರಾಜು, ಅಂದು ಬೆಳಗ್ಗೆ ಮಾನಸ ಗಂಗೋತ್ರಿ ರಾಣಿ ಬಹಾದ್ದೂರ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸುವ ಹಾಗೂ ಅವರು ಜಾರಿಗೆ ತಂದ ಅನ್ನಭಾಗ್ಯ ಯೋಜನೆ ಕುರಿತ ಪ್ರೊ.ಟಿ.ಎಂ. ಮಹೇಶ್ ಅವರು ಬರೆದಿರುವ ಕೃತಿ ಬಿಡುಗಡೆ ಮಾಡಲಾಗುವುದು.

ಮಹೇಶ್ ಅವರು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅನ್ನಭಾಗ್ಯ ಯೋಜನೆ ಉಪಯೋಗ ಮಹಿತಿ ಪಡೆದು ಈ ಕೃತಿ ರಚಿಸಿದ್ದಾರೆಂದರು.

ಅಲ್ಲದೆ, ಟಿಪ್ಪು ಸುಲ್ತಾನ್ ಎಸ್‌ಸಿ, ಎಸ್‌ಟಿ ವರ್ಗಗಳಿಗೆ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ಆತನ ಜಯಂತಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ, ಕೋರ್ಟ್ ತೀರ್ಪುಗಳು ಎಸ್‌ಸಿ, ಎಸ್‌ಟಿ ವರ್ಗಗಳಿಗೆ ಮಾರಕವಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರದ ಬದ್ಧತೆ ಪ್ರಶ್ನಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಸಮಾರಂಭದಲ್ಲಿ ಪ್ರಸ್ತುತ ರಾಜಕಾರಣ ಮತ್ತು ಅಹಿಂದ ಅಸ್ತಿತ್ವ ಶೀರ್ಷಿಕೆಯಡಿ ವಿಚಾರ ಸಮಕಿಣ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರೊ.ಟಿ.ಎಂ. ಮಹೇಶ್, ಶಿವಪ್ಪ, ಸಿದ್ದಸ್ವಾಮಿ, ಜಯಕುಮಾರ್, ಶಿವಸ್ವಾಮಿ, ಇತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: