
ಪ್ರಮುಖ ಸುದ್ದಿಮೈಸೂರು
ನ.23 ರಿಂದ ನಾಲ್ಕು ದಿನ ಮೈಸೂರಿನಲ್ಲಿ ‘ನಮ್ಮೂರ ತಿಂಡಿ’ ಮೇಳ
ಮೈಸೂರು, ನ.21 : ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನ.23 ರಿಂದ 26ರವರೆಗೆ ‘ನಮ್ಮೂರ ತಿಂಡಿ’ ಆಹಾರ ಮೇಳ ಆಯೋಜಿಸಲಾಗಿದೆ ಎಂದು ಭಾಗ್ಯಲಕ್ಷ್ಮೀ ಎಂಟರ್ ಪ್ರೈಸಸ್ ನ ಪ್ರತಿನಿಧಿ ಅರವಿಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.23ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಮೇಳಕ್ಕೆ ಚಾಲನೆ ನೀಡಲಿದ್ದು ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮೇಳದ ಅಂಗವಾಗಿ ನಾಲ್ಕು ದಿನಗಳ ಕಾಲ ಅಡುಗೆ ಮಾಡುವುದು, ಮುದ್ದು ಮಕ್ಕಳ ಪ್ರದರ್ಶನ, ಸಕತ್ ಜೋಡಿ, ಚಿತ್ರಕಲೆ, ಬೆಂಕಿ ರಹಿತ ಅಡುಗೆ, ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಆಹಾರ ಜೊತೆಗೆ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ನ.23ರಂದು ಸಂಜೆ 6ಕ್ಕೆ ಸುಧಾ ಬರಗೂರು ಅವರಿಂದ ಹಾಸ್ಯಮೇಳ, ದಿ.24ರಂದು ವಿಜಯ ಪ್ರಕಾಶ್, ಅನುರಾಧ ಭಟ್ ರಿಂದ ಸಂಗೀತ ಸಂಜೆ, 25ರಂದು ಬೀಟ್ ಗುರೂಸ್ ತಂಡದಿಂದ ಬೀಟ್ ಮೇಳ, 26ರಂದು ಮಿಮಿಕ್ರಿ ಗೋಪಿಯವರಿಂದ ಮಿಮಿಕ್ರಿ ಮೇಳವು ಮನರಂಜಿಸಲಿದೆ ಎಂದು ತಿಳಿಸಿದರು.
ಸ್ಪರ್ದೆಯಲ್ಲಿ ಸಿಹಿಕಹಿ ಚಂದ್ರು ಸೇರಿದಂತೆ ಇತರರು ತೀರ್ಪುಗಾರರಾಗಿ ಭಾಗವಹಿಸಲಿದ್ದು ಅಂತಿಮ ದಿನ ಅವರು ಕೂಡ ಅಡುಗೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ, ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ನೆನಪಿನ ಕಾಣಿಕೆ ನೀಡಲಾಗುವುದು, 20 ರೂ.ಗಳ ಪ್ರವೇಶ ಟಿಕೆಟ್ ವಿಧಿಸಲಾಗಿದ್ದು ಇದರೊಂದಿಗೆ ವಿಶೇಷ ಪ್ರವೇಶವು ಇರಲಿದೆ ಎಂದು ಹೇಳಿದರು.
ತನಯ್ ಬೈಸಾನಿ, ಮೂರ್ತಿ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)