ಸುದ್ದಿ ಸಂಕ್ಷಿಪ್ತ

ನ.24, 25 ರಂದು ಕೃಷಿ ಮೇಳ

ಮೈಸೂರು,.21-ರೈತರಿಗಾಗಿ ನ.24, 25 ರಂದು ಬೆಳಿಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಮಂಡ್ಯ ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ ವಿ.ಸಿ.ಫಾರಂ ಮಂಡ್ಯ, ಕರ್ನಾಟಕ ರಾಜ್ಯ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ,ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು ಹಾಗೂ ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ.

ಕೃಷಿ ಮೇಳದಲ್ಲಿ ಭತ್ತ, ರಾಗಿ, ಕಬ್ಬು, ಮುಸುಕಿನ ಜೋಳ, ಮೇವು ಬೆಳೆ ಹಾಗೂ ತೋಟಗಾರಿಕೆ ಬೆಳೆಯಲ್ಲಿ ಸುಧಾರಿತ ಹಾಗೂ ಹೈಬ್ರಿಡ್ ತಳಿಗಳು, ಭತ್ತ ಮತ್ತು ಕಬ್ಬು ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿ, ಅಂಗಾಂಶ ಕೃಷಿ, ನೀರು ನಿರ್ವಹಣಾ ತಂತ್ರಜ್ಞಾನ, ರಾಸಾಯನಿಕ ಮುಕ್ತ ಬೆಲ್ಲದ ತಯಾರಿಕಾ ತಾಂತ್ರಿಕತೆ ಪ್ರಾತ್ಯಕ್ಷಿಕೆ, ಕೃಷಿ ಉಪಕರಣಗಳು, ಹೈನುಗಾರಿಕೆಯಲ್ಲಿ ಸುಧಾರಿತ ತಳಿಗಳು ಮತ್ತು ಭತ್ತ ಹಾಗೂ ಕಬ್ಬು ಬೆಳೆಗಳಿಗೆ ಪರ್ಯಾಯ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಉಪಕರಣಗಳು, ಹೈನುಗಾರಿಕೆಯಲ್ಲಿ ಸುಧಾರಿತ ತಳಿಗಳು ಮತ್ತು ಭತ್ತ ಹಾಗೂ ಕಬ್ಬು ಬೆಳೆಗಳಿಗೆ ಪರ್ಯಾಯ ಬೆಳೆಗಳ ಪ್ರಾತ್ಯಕ್ಷತೆಗಳನ್ನೊಳಗೊಂಡಂತೆ ವಿವಿಧ ತಂತ್ರಜ್ಞಾನಗಳನ್ನು ರೈತರು, ವಿಸ್ತರಣಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ವೀಕ್ಷಿಸಬಹುದಾಗಿದೆ. (ಎಂ.ಎನ್)

Leave a Reply

comments

Related Articles

error: