ದೇಶಪ್ರಮುಖ ಸುದ್ದಿ

ಜಗದೀಶ್ ಸಿಂಗ್ ಖೇಹರ್ ಸುಪ್ರೀಂ ಕೋರ್ಟ್‍ನ ನೂತನ ಮುಖ್ಯ ನ್ಯಾಯಮೂರ್ತಿ

ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಜಗದೀಶ್ ಸಿಂಗ್ ಖೇಹರ್ ಅವರು ಬುಧವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.

ಸುಪ್ರೀಂಕೋರ್ಟ್‍ ನ್ಯಾಯಮೂರ್ತಿಗಳಲ್ಲಿ ಹಿರಿಯವರಾಗಿರುವ ಖೇಹರ್ ಅವರು 44ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದು, ಅವರ ಅಧಿಕಾರಾವಧಿ ಜ.4, 2017ರಿಂದ ಆಗಸ್ಟ್ 28ರ ವರೆಗೆ ಇರಲಿದೆ. ಇವರು ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿಯಾಗಿ ಆಯ್ಕೆಯಾದವರಲ್ಲಿ ಸಿಖ್ ಸಮುದಾಯದ ಮೊದಲಿಗರಾಗಿದ್ದಾರೆ.

1979ರಲ್ಲಿ ವಕೀಲ ವೃತ್ತಿ ಆರಂಭಿಸಿದ ಖೇಹರ್ ಅವರು, ಪಂಚಾಬ್, ಹರಿಯಾಣ, ಹಿಮಾಚಲ ಪ್ರದೇಶ ಹೈಕೋರ್ಟ್‍ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ ಉತ್ತರಾಖಂಡ ಹಾಗೂ ಕರ್ನಾಟಕ ಹೈಕೋರ್ಟ್‍ನಲ್ಲಿಯೂ ಮುಖ್ಯ ನ್ಯಾಯಮೂರ್ತಿಯಾಗಿ ಖೇಹರ್‍ ಅವರು ಸೇವೆ ಸಲ್ಲಿಸಿದ್ದಾರೆ. 2011ರಿಂದ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಇಂದಿನಿಂದ ಆಗಸ್ಟ್’ವರೆಗೂ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

Leave a Reply

comments

Related Articles

error: