ಮೈಸೂರು

ಕಾರಿಗೆ ಗುದ್ದಿದ ಲಾರಿ : ಕಾರು ಜಖಂ

ಮೈಸೂರು,ನ.22:- ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡ ಚಾಲಕ ಕಾರನ್ನು ಪೊಲೀಸ್ ಚೌಕಿಗೆ ಗುದ್ದಿದ್ದು, ಕಾರು ಜಖಂಗೊಂಡ ಘಟನೆ ಕುವೆಂಪುನಗರದ ಅಪೋಲೋ ಆಸ್ಪತ್ರೆ ವೃತ್ತದಲ್ಲಿ ನಡೆದಿದೆ.

ಇಂದು ಬೆಳಿಗ್ಗೆ 6ಗಂಟೆಯ ಸುಮಾರಿಗೆ ಕೆ.ಜಿ.ಕೊಪ್ಪಲು ಕಡೆಯಿಂದ ಕಾರು ಚಾಲಕ ಚಾಲನೆ ಮಾಡಿಕೊಂಡು ಹೋಗಿದ್ದು, ಎದುರಿನಿಂದ ಬಂದ ಲಾರಿ ಕಾರಿಗೆ ಗುದ್ದಿದೆ. ಕಾರಿನ ಚಾಲಕ ರಮೇಶ್ ನಿಯಂತ್ರಣ ಕಳೆದುಕೊಂಡು ಪೊಲೀಸ್ ಚೌಕಿಗೆ ಗುದ್ದಿದ್ದು, ಚೌಕಿ ಕಿತ್ತು ಬಿದ್ದಿದೆ. ಕಾರಿನ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕ ರಮೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ರಮೇಶ್ ಮೂಲತಃ ಮಡಿಕೇರಿ ನಿವಾಸಿಯಾಗಿದ್ದು, ಹಾಲಿ ಕುವೆಂಪುನಗರದಲ್ಲಿ ವಾಸಿಸುತ್ತಿದ್ದಾರೆ.

ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: