ಕ್ರೀಡೆ

ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ

ಮೆಲ್ಬೋರ್ನ್,ನ.22-ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರ ತಂಡ ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಪೀಟರ್ ಹ್ಯಾಂಡ್ಸ್‌ಕಾಂಬ್‌ಗೆ ಮತ್ತೆ ಸ್ಥಾನ ನೀಡಿದೆ.

ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮಾರ್ಕಸ್ ಹ್ಯಾರಿಸ್‌ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂಜುರಿಯಿಂದ ಚೇತರಿಸಿಕೊಂಡಿರುವ ಉಸ್ಮಾನ್ ಖವಾಜ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಟ್ರೇಲಿಯಾ ತಂಡ: ಟಿಮ್ ಪೈನೆ(ನಾಯಕ), ಆಯರೋನ್ ಫಿಂಚ್, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ನಥನ್ ಲಿಯೋನ್, ಮಿಚೆಲ್ ಮಾರ್ಶ್, ಶಾನ್ ಮಾರ್ಶ್, ಮಿಚೆಲ್ ಸ್ಟಾರ್ಕ್, ಕ್ರಿಸ್ ಟ್ರೆಮೈನ್, ಪೀಟರ್ ಸಿಡಲ್. (ಎಂ.ಎನ್)

 

Leave a Reply

comments

Related Articles

error: