ಮೈಸೂರು

ಟಿಸಿಎಂ ಭದ್ರತಾ ಏಜೆನ್ಸಿಯ ಬೀಗ ಒಡೆದ ಕಳ್ಳರು : ಎಲೆಕ್ಟ್ರಾನಿಕ್ ಪರಿಕರ ಕಳವು

ಮೈಸೂರು,ನ.23:- ಅಗ್ರಹಾರದ ಮಹಾಗಣಪತಿ ದೇವಸ್ಥಾನದ ಹಿಂಭಾಗ  ಇರುವ ಟಿಸಿಎಂ ಭದ್ರತಾ ಏಜೆನ್ಸಿಯ ಬೀಗ ಒಡೆದ ಕಳ್ಳರು ಒಳನುಗ್ಗಿ ಒಂದು ಲಕ್ಷರೂ.ಮೌಲ್ಯದ ಎಲೆಕ್ಟ್ರಾನಿಕ್ ಪರಿಕರಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

ಕಂಪ್ಯೂಟರ್, ಲ್ಯಾಪ್ ಟಾಪ್, ಮಾನಿಟರ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಡಿವಿಆರ್ ಗಳನ್ನು ಕಳವು ಮಾಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಬಂದು ಪರಿಶೀಲನೆ ನಡೆಸಿದೆ. ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: