ಮೈಸೂರು

ವೈದ್ಯರ ಎಡವಟ್ಟಿನಿಂದ ಸಾವು ಬದುಕಿನ ನಡುವೆ ಬಾಲಕನ ಹೋರಾಟ

ಮೈಸೂರು,ನ.23:- ವೈದ್ಯರ ಯಡವಟ್ಟಿನಿಂದ ಬಾಲಕ  ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಸ್ಥಿತಿಯಲ್ಲಿರುವ ಘಟನೆ ನಗರದ ಕೆ ಆರ್ ಆಸ್ಪತ್ರೆಯಲ್ಲಿ ನಡೆದಿದ್ದು, ಮನೆಯವರು ವೈದ್ಯರ ವಿರುದ್ಧ ಆರೋಪಿಸಿದ್ದಾರೆ.

ಬಾಲಕನನ್ನು ನಂಜನಗೂಡು ತಾಲೂಕಿನ ಸಿಂಧುವಳ್ಳಿ ಗ್ರಾಮದ ನಿವಾಸಿ ಅಭಿ (14) ಎಂದು ಹೇಳಲಾಗಿದ್ದು, ಕಳೆದ ವಾರದ ಹಿಂದಷ್ಟೇ ಕಿವಿ ನೋವು ಎಂದು ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಕಳೆದ ರಾತ್ರಿಯಷ್ಟೇ ವೈದ್ಯರು ಬೇರೆ ಯಾವುದೋ ಮೆಡಿಸನ್ ಕೊಟ್ಟು ಬಾಲಕ  ಸಾವು-ಬದುಕಿನ ನಡುವೆ ನರಳಾಡುವಂತೆ  ಮಾಡಿದ್ದಾರೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: